Select Your Language

Notifications

webdunia
webdunia
webdunia
webdunia

ರಾಷ್ಟ್ರಪತಿ ಹುದ್ದೆ ದುರುಪಯೋಗಪಡಿಸಿಕೊಂಡ ಸರ್ಕಾರ: ಕೆ.ಎಸ್.ಈಶ್ವರಪ್ಪ

ರಾಷ್ಟ್ರಪತಿ ಹುದ್ದೆ ದುರುಪಯೋಗಪಡಿಸಿಕೊಂಡ ಸರ್ಕಾರ: ಕೆ.ಎಸ್.ಈಶ್ವರಪ್ಪ
ಬೆಂಗಳೂರು , ಬುಧವಾರ, 25 ಅಕ್ಟೋಬರ್ 2017 (14:25 IST)
ರಾಜ್ಯ ಸರಕಾರ ರಾಷ್ಟ್ರಪತಿ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಸಿದ್ದಪಡಿಸಿದ ಭಾಷಣವನ್ನು ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ಸದನದಲ್ಲಿ ಓದಿದ್ದಾರೆ ಎಂದು ಆರೋಪಿಸಿದರು.
 
ದೇಶದ್ರೋಹಿ ಟಿಪ್ಪು ಸುಲ್ತಾನ್ ಹೆಸರನ್ನು ರಾಷ್ಟ್ರಪತಿಯವರಿಂದ ಭಾಷಣದಲ್ಲಿ ಪ್ರಸ್ತಾಪಿಸಿ, ಕಾಂಗ್ರೆಸ್ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಕಿಡಿಕಾರಿದ್ದಾರೆ.
 
ವಿಧಾನಸೌಧದ ವಜ್ರ ಮಹೋತ್ಸವ ಸಂದರ್ಭದಲ್ಲಿ ಭಾಷಣ ಮಾಡಿದ ರಾಷ್ಟ್ರಪತಿ ಕೋವಿಂದ್, ಟಿಪ್ಪು ಸುಲ್ತಾನ್ ಓರ್ವ ಶೂರ ಯೋಧ, ದೇಶಭಕ್ತ, ಟಿಪ್ಪುಸುಲ್ತಾನ್ ಅಂದು ಬಳಿಸಿದ ರಾಕೆಟ್‌ಗಳ ತಂತ್ರಜ್ಞಾನವನ್ನು ನಂತರ ಯುರೋಪ್ ರಾಷ್ಟ್ರಗಳು ಬಳಕೆ ಮಾಡಿಕೊಂಡಿವೆ ಎಂದು ತಿಳಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯ ಕುಡಿಸಿ 2 ವರ್ಷಗಳಿಂದ ತಾಯಿ, ಮೂವರು ಪುತ್ರಿಯರ ಮೇಲೆ ಅತ್ಯಾಚಾರ