Select Your Language

Notifications

webdunia
webdunia
webdunia
webdunia

ಬಿಎಸ್ ವೈ ಬಾಂಬ್ ಗೆ ರಾಜ್ಯ ಬಿಜೆಪಿ ನಾಯಕರು ತಲ್ಲಣ..!

ಬಿಎಸ್ ವೈ ಬಾಂಬ್ ಗೆ ರಾಜ್ಯ ಬಿಜೆಪಿ ನಾಯಕರು ತಲ್ಲಣ..!
bangalore , ಬುಧವಾರ, 8 ಮಾರ್ಚ್ 2023 (18:35 IST)
ಮಾಜಿ ಸಿಎಂ ಬಿಎಸ್ ವೈ ಹಾಕಿರೋ ಬಾಂಬ್ ಗೆ ರಾಜ್ಯ ಬಿಜೆಪಿ ತಲ್ಲಣಗೊಂಡಿದೆ.ಕಲಬುರಗಿಯಲ್ಲಿ ಕೊಟ್ಟಿರೋ ಒಂದೇ ಒಂದು ಸ್ಟೇಟ್ ಮೆಂಟ್ ಹಾಲಿ ಬಿಜೆಪಿ ಶಾಸಕರ ಮನೋಬಲವನ್ನೇ ಕುಗ್ಗಿಸಿದೆ. ಯಡಿಯೂರಪ್ಪನವ್ರೇ ಈ ಮಾತನ್ನ ಹೇಳಿದ್ರೋ ಇಲ್ಲಾ ಅವರ ಬಾಯಿಂದ ಹೈಕಮಾಂಡ್ ಹೇಳಿಸಿದ್ಯೋ ಅಂತ ಒಳಗೊಳಗೇ ಎದೆ ಬಡಿದುಕೊಳ್ತಿದ್ದಾರೆ ಶಾಸಕರು.. ಚುನಾವಣೆಯ ಹೊತ್ತಲ್ಲೇ ಮಾಜಿ ಸಿಎಂ ಹೇಳಿಕೆ ಪಕ್ಷದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು ಗುಜರಾತ್ ಮಾಡಲ್ ಬಂದೇ ಬಿಡ್ತಾ ಅನ್ನೋ ಆತಂಕ ಶುರುವಾಗಿದೆ ನಾಯಕರಿಗೆ.ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗುಜರಾತ್ ಮಾಡೆಲ್ ಅಪ್ಲೈ ಆಗುತ್ತೆ ಅನ್ನೋ ಊಹಾಪೋಹಗಳು ಕಳೆದ 2-3 ತಿಂಗಳಿನಿಂದ ಹರಿದಾಡ್ತಾನೇ ಇದ್ವು. ಆದ್ರೀಗ ಅದಕ್ಕೆ ಉತ್ತರ ಸಿಕ್ಕೇ ಬಿಟ್ಟಿದೆ  ಎಲೆಕ್ಷನ್ ಹತ್ತಿರದಲ್ಲೇ ಹಲವು ಹಾಲಿ ಬಿಜೆಪಿ ಶಾಸಕರಿಗೆ ಶಾಕ್ ಎದುರಾಗಿದೆ. ನಿನ್ನೆ ಕಲಬುರಗಿಯಲ್ಲಿ ಮಾಜಿ ಸಿಎಂ ಬಿಎಸ್ ವೈ ಕೊಟ್ಟಿರುವ ಹೇಳಿಕೆ ಕೇಳಿ ಅವರ ಎದೆಯಲ್ಲಿ ನಡುಕು ಶುರುವಾಗಿದೆ.ಎಲ್ಲಿ ಟಿಕೆಟ್ ಮಿಸ್ಸಾಗುತ್ತೋ ಎಂಬ ಆತಂಕ ಎದುರಾಗಿದೆ. ಮುಂದೇನು ಮಾಡಬೇಕು ಎಂದು ತಲೆ ಕೆರೆದುಕೊಂಡು ಕುಳ್ತಿದ್ದಾರೆ. ಯಾಕಂದ್ರೆ ಪಕ್ಷದಲ್ಲಿರುವ ಬೇರ್ಯಾರೋ ಅಂತ ಹೇಳಿಕೆ ಕೊಟ್ಟಿದ್ರೆ ಸುಮ್ಮನಾಗ್ರಿದ್ರೇನೋ. ಆದ್ರೆ  ಹೇಳಿಕೆ ಕೊಟ್ಟಿರೋರು ಸಾಮಾನ್ಯರಲ್ಲ ರಾಜ್ಯದಲ್ಲಿ ಪಕ್ಷವನ್ನ ಕಟ್ಟಿ ಅಧಿಕಾರಕ್ಕೆ ತಂದವ್ರು. ಕೇಂದ್ರ ಸಂಸದೀಯ ಮಂಡಳಿಯಲ್ಲಿ ಸದಸ್ಯರಾಗಿರುವ ಬಿಎಸ್ ವೈ. ಹೀಗಾಗಿ ಸಹಜವಾಗಿಯೇ ಕೆಲವು ಶಾಸಕರಲ್ಲಿ ಆತಂಕ ಶುರುವಾಗಿದೆ ಅದು ಸಹಜವೂ ಹೌದು. ಆದ್ರೂ ಕೊನೆಯ ಕ್ಷಣದಲ್ಲಿ ಏನಾದ್ರೂ‌ ಮ್ಯಾಜಿಕ್ ನಡೆಯಬಹುದೆಂಬ ಆಸೆ ಅವರಲ್ಲಿ ಕಾಣ್ತಿದೆ.

ಇನ್ನು ಈಗಾಗಲೇ ಹಲವು ಶಾಸಕರ ಮೇಲೆ ಗುರುತರ ಆರೋಪಗಳು ಕೇಳಿಬಂದಿವೆ. ಒಂದಿಬ್ಬರ ಮೇಲೆ ಚೆಕ್ ಬೌನ್ಸ್ ಕೇಸ್ ಹಾಗೂ ಸಾರ್ವಜನಿಕ ಹಣ ದುರುಪಯೋಗದ ಮೇಲೆ ಕನ್ವಿಕ್ಟ್ ಆಗಿದೆ. ೪೦% ಕಮೀಷನ್ ಆರೋಪವೂ ಇವೆ ಇದ್ರ ಜೊತೆಗೆ ಪಕ್ಷದ ಅಲಿಖಿತ ನಿಯಮದಂತೆ 75 ವರ್ಷ ಪೂರ್ಣಗೊಂಡವರಿಗೆ ಟಿಕೆಟ್ ಇಲ್ಲವೆಂಬ ಮಾತಿದೆ. ಅದನ್ನ ಗುಜರಾತ್ ಚುನಾವಣೆಯಲ್ಲಿ ಜಾರಿಗೆ ತಂದಾಗಿದೆ ಕರ್ನಾಟಕದಲ್ಲೂ ಅದನ್ನ ಇಂಪ್ಲಿಮೆಂಟ್ ಮಾಡಬೇಕೆಂಬ ಆಲೋಚನೆಯಿದೆ. ಅಲ್ಲದೆ ಆರೋಪಿತ ಜಾಗಗಳಲ್ಲಿ‌ಹೊಸ ಮುಖಗಳಿಗೆ ಅವಕಾಶ ಕೊಡುವ ಮೂಲಕ ನಾವು ಭ್ರಷ್ಟಾಚಾರಕ್ಕೆ ಆಸ್ಪದ ನೀಡಲ್ಲವೆಂಬ ಸಂದೇಶವನ್ನ ಜನರಿಗೆ ಸಾರುವುದು ಸೇರಿದೆ. ಹೀಗಾಗಿಯೇ ಡಜನ್ ಗೂ ಹೆಚ್ಚು ಶಾಸಕರಿಗೆ ಈ ಭಾರಿ ಟಿಕೆಟ್ ನೀಡುವುದಿಲ್ಲವೆಂಬ ಮಾತು ಕೇಳಿಬರ್ತಿದೆ.

[17:52, 3/8/2023] Malla: ಈ ಬಾರಿ ಯಾರಿಗೆ ಟಿಕೆಟ್ ಮಿಸ್ಸಾಗಬಹುದು..?
 
-ಚನ್ನಗಿರಿ ಕ್ಷೇತ್ರದ ಮಾಡಾಳು ವಿರೂಪಾಕ್ಷಪ್ಪ
-ಚಿಕ್ಕಪೇಟೆಯ ಉದಯ್ ಗರುಡಾಚಾರ್
-ಹಾವೇರಿಯ ನೆಹರು ಓಲೇಕಾರ್
-ಮೂಡಿಗೆರೆಯ ಎಂ.ಪಿ.ಕುಮಾರಸ್ವಾಮಿ
-ಬಸವನಗುಡಿಯ ರವಿಸುಬ್ರಮಣ್ಯ
-ದಾವಣಗೆರೆ ಉತ್ತರದ ಎಸ್.ಎ.ರವೀಂದ್ರ ನಾಥ್
-ಶಿವಮೊಗ್ಗದ ಕೆ.ಎಸ್.ಈಶ್ವರಪ್ಪ
- ಕನಕಗಿರಿಯ ಬಸವರಾಜ ದಡೆಸಗೂರ
-ರೋಣದ ಕಳಕಪ್ಪ ಬಂಡಿ
- ಶಿರಹಟ್ಟಿಯ ರಾಮಪ್ಪ ಲಮಾಣಿ
- ಚಿತ್ರದುರ್ಗದ ತಿಪ್ಪಾರೆಡ್ಡಿ
- ರಾಮದುರ್ಗದ ಮಹದೇವಪ್ಪ ಯಾದವಾಡ
-ಕಲಘಟಕಿಯ ನಿಂಬಣ್ಣನವರ್
-ಮುಧೋಳದ ಗೋವಿಂದ ಕಾರಜೋಳ
-ಮಾಜಿ ಸಿಎಂ ಜಗದೀಶ್ ಶೆಟ್ಟರ್
 ಯಡಿಯೂರಪ್ಪನವರ ಹೇಳಿಕೆ ಇಡೀ ಬಿಜೆಪಿ ಶಾಸಕರನ್ನೇ ಗಾಬರಿ ಬೀಳುವಂತೆ ಮಾಡಿದ್ದು .ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಶುರುವಚ್ಚಿಕೊಂಡಿದ್ದ ಶಾಸಕರಿಗೆ ಈಗ ಟಿಕೆಟ್ ಸಿಗುತ್ತೋ ಇಲ್ವೋ ಅನ್ನೋ ಆತಂಕ ಶುರುವಾಗಿದೆ..ಇದು ಕೆಲವರು ಬೇರೆ ಪಕ್ಷಗಳ ಕಡೆ ಮುಖಮಾಡೋದಕ್ಕೂ ದಾರಿ ಮಾಡಿಕೊಟ್ಟಂತಾಗಿದೆ. ಗುಜರಾತ್ ಮಾಡೆಲ್ ಆತಂಕ ಶಾಸಕರಿಗೆ ಟೆನ್ಷನ್ ತಂದಿಟ್ಟಿರೋದಂತೂ ಖಚಿತವಾಗೋಯ್ತು.
 


Share this Story:

Follow Webdunia kannada

ಮುಂದಿನ ಸುದ್ದಿ

ಮಾಡಳ್ ವಿರೂಪಾಕ್ಷ ಕೇಸ್ ಮಯಚ್ಚಿಹಾಕಲು ಯತ್ನ- ವಿಶ್ವನಾಥ್