Select Your Language

Notifications

webdunia
webdunia
webdunia
webdunia

ಮಾಡಳ್ ವಿರೂಪಾಕ್ಷ ಕೇಸ್ ಮಯಚ್ಚಿಹಾಕಲು ಯತ್ನ- ವಿಶ್ವನಾಥ್

Vishwanath tries to cover up the model Virupaksha case
bangalore , ಬುಧವಾರ, 8 ಮಾರ್ಚ್ 2023 (18:30 IST)
ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ವಿಧಾನ‌ ಪರಿಷತ್ ಸದಸ್ಯರಾದ ಅಡಗೂರು ಹೆಚ್. ವಿಶ್ವನಾಥ್ ಸುದ್ದಿಗೋಷ್ಟಿ ನಡೆಸಿದ್ದು, ವಸತಿ ಸಚಿವ ವಿ ಸೋಮಣ್ಣ , ಅರೋಗ್ಯ ಸಚಿವ ಸುಧಾಕರ್ ಹಾಗೂ ಶಾಸಕ ಮಾಡಳ್ ವಿರೂಪಾಕ್ಷಪ್ಪ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದ್ದು,ರಾಜ್ಯ ದಲ್ಲಿ ಹೆಚ್ಚಾಗುತ್ತಿರು ಭ್ರಷ್ಟಾಚಾರಗಳ ಬಗ್ಗೆ ಕಿಡೀಕಾರುತ್ತ, ಮಾಡಳ್ ಕೇಸ್ ಅನ್ನು  ಸರ್ಕಾರ ಕೂಡ ಮುಚ್ಚಿಹಾಕುಲು ಪ್ರಯತ್ನಿಸುತ್ತಿದೆ, ಇಲ್ಲವಾದರೆ ಸರ್ಕಾರದ ಪರ ವಾದ ಮಾಡಬೇಕಾದ ವಕೀಲರು ಯಾಕೇ ಹಾಜರಾಗಿಲಿಲ್ಲ ಎಂದು ಪ್ರಶ್ನೆ ಮಾಡಿ ಸರ್ಕಾರದ ವಿರುದ್ಧ ಹೌಹಾರಿದ್ದಾರೆ, ಇನ್ನೂ ಇದೇ ಸಂದರ್ಭದಲ್ಲಿ ಸಚಿವ ವಿ ಸೋಮಣ್ಣ ಹೆಸರನ್ನ ಪ್ರಸ್ತಾಪಿಸಿ ವಸತಿ ಹಂಚಿಕೆಯಲ್ಲೂ ಸಹ ವಸತಿ ಸಚಿವರಿಗೂ ಸರಿಯಾದ ಮಾಹಿತಿ ಇಲ್ಲ ಎಂದಿದ್ದಾರೆ, ಸರಿಯಾದ ರೀತಿಯಲ್ಲಿ ವಸತಿ ಹಂಚಿಕೆ ಆಗಿಲ್ಲ ಅಂತ ಸರ್ಕಾರದ ವಿರುದ್ದ ಆರೋಪಿಸಿದ್ದು ಸುಳ್ಳು ಹೇಳಿ ಸರ್ಕಾರ ಜನರಿಗೆ ಮೋಸ ಮಾಡ್ತಿದೆ ಎಂದರು ಇನ್ನೂ ಅರೋಗ್ಯ ಸಚಿವ ಸುಧಾಕರ್ 15 ಸಾವಿರ ಕೋಟಿ ಲೂಟಿ ಹೊಡೆದಿದ್ದಾರೆ, ಆ ಬಗ್ಗೆ ಏನು ಕ್ರಮ ಆಗಿದೆ ಅಂತ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದು,ಸುದ್ದಿಗೋಷ್ಠಿಯ ಉದ್ದಕ್ಕೂ ತಮ್ಮ ಪಕ್ಷದ ನಾಯಕರ ವಿರುದ್ಧವೇ ಕಿಡಿಕರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಲ್ಲೇಶ್ವರಂನಲ್ಲಿ ಮಹಿಳಾ ದಿನಾಚರಣೆ