Select Your Language

Notifications

webdunia
webdunia
webdunia
webdunia

ಫೆ.16 ರಿಂದ ರಾಜ್ಯದಲ್ಲಿ ಪಿಯುಸಿ ಪದವಿ ತರಗತಿಗಳು ಆರಂಭ

Starting PUC Degree classe
bangalore , ಮಂಗಳವಾರ, 15 ಫೆಬ್ರವರಿ 2022 (20:53 IST)
ಬುಧವಾರದಿಂದ ಪಿಯುಸಿ, ಪದವಿ ತರಗತಿಗಳು ಆರಂಭವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ರಾಜ್ಯದಲ್ಲಿ ಸಮವಸ್ತ್ರ ವಿವಾದ ಭುಗಿಲೆದ್ದಿದ್ದು, ಈ ಸಂಬಂಧ ಸಿಎಂ 'ಬಸವರಾಜ ಬೊಮ್ಮಾಯಿ' ನೇತೃತ್ವದಲ್ಲಿ ಮಹತ್ವದ ನಡೆದಿದೆ.
ಸಭೆ ಬಳಿಕ ಮಾತನಾಡಿದ ಸಚಿವರು ಫೆ.16 ಬುಧವಾರದಿಂದ ಪಿಯುಸಿ, ಪದವಿ ತರಗತಿಗಳು ಆರಂಭವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ. ಹೈಕೋರ್ಟ್ ಸೂಚನೆಯಂತೆ ಕಾಲೇಜು ಪ್ರಾರಂಭಿಸಿದ್ದೇವೆ, ಹೈಕೋರ್ಟ್ ಆದೇಶ ಪಾಲಿಸಬೇಕು. ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಬರಬೇಕು. ಕೋರ್ಟ್ ಆದೇಶ ಉಲ್ಲಂಘಿಸುವಂತಿಲ್ಲ ಎಂದು ಸಚಿವರು ಹೇಳಿದ್ದಾರೆ.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಶಕ್ತಿ ಭವನದಲ್ಲಿ ಸಭೆ ನಡೆದಿದ್ದು , ಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಹಿಜಾಬ್ ಕುರಿತ ಹೇಳಿಕೆ ವಿಚಾರ: ಕ್ಷಮೆ ಕೋರಿದ ಶಾಸಕ ಝಮೀರ್ ಅಹ್ಮದ್