ನವದೆಹಲಿ : ಕೋವಿಡ್ ರೂಪಾಂತರಿಗಳಾದ ಒಮಿಕ್ರೋನ್ ಮತ್ತು ಡೆಲ್ಟಾ ವೈರಸ್ಗಳ ಅಬ್ಬರ ಮುಂದುವರೆದಿದ್ದು, ಶುಕ್ರವಾರ ವಿಶ್ವಾದ್ಯಂತ ಒಂದೇ ದಿನ 16.39 ಲಕ್ಷ ಕೋವಿಡ್ ಪ್ರಕರಣಗಳು ದಾಖಲಾಗಿವೆ.
ಇದು ಸಾರ್ವಕಾಲಿಕ ಗರಿಷ್ಠ ದೈನಂದಿನ ಸಂಖ್ಯೆಯಾಗಿದೆ. ನವೆಂಬರ್ 24ರಂದು ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡ ಒಮಿಕ್ರೋನ್ ಸೋಂಕು ಅತ್ಯಂತ ವೇಗವಾಗಿ ಇಡೀ ಪ್ರಪಂಚವನ್ನು ಆಕ್ರಮಿಸಿಕೊಳ್ಳುತ್ತಿದೆ.
ಒಮಿಕ್ರೋನ್ ಸೋಂಕು ವೇಗವಾಗಿ ಹರಡುತ್ತಿರುವುದರಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. ಪ್ರಪಂಚದಲ್ಲಿ ಈವರೆಗೆ 28.86 ಕೋಟಿ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 54.55 ಲಕ್ಷ ಜನರು ಸಾವಿಗೀಡಾಗಿದ್ದಾರೆ.