Publish Date: Mon, 08 Apr 2019 (17:29 IST)
Updated Date: Mon, 08 Apr 2019 (17:34 IST)
3 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಹಿರಿಯ ರಂಗಭೂಮಿ ಕಲಾವಿದರಾಗಿ ಏಪ್ರಿಲ್ 11 ರಿಂದ ಮೇ 11ವರಿಗೆ ಹುಬ್ಬಳ್ಳಿಯಲ್ಲಿ ಮಕ್ಕಳಿಗಾಗಿ ನಟನೆ ಹಾಗೂ ಸಂಸ್ಕೃತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಹೀಗಂತ ಯಶವಂತ ಸರದೇಶಪಾಂಡೆ ತಿಳಿಸಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಒಂದು ಶಿಬಿರದಲ್ಲಿ ಹಿರಿಯ ರಂಗ ಕಲಾವಿದರಾದ ನಾಗೇಂದ್ರ ಶಾ, ಸಿಹಿಕಹಿ ಚಂದ್ರು, ಮಂಡ್ಯ ರಮೇಶ್ ಹಾಗೂ ಸುನೇತ್ರ ಪಂಡಿತ ಅವರು ಭಾಗಿಯಾಗಲಿದ್ದಾರೆ.
ಮಕ್ಕಳಿಗೆ ರಂಗಭೂಮಿಯ ಇತಿಹಾಸ ಹಾಗೂ ಅವರಲ್ಲಿ ಇರುವಂತಹ ಕೆಲವೊಂದಿಷ್ಟು ಕೌಶಲ್ಯಗಳನ್ನು ಬೆಳೆಸುವದರ ಮೂಲಕ ತರಬೇತಿ ಸಮಯದಲ್ಲಿ ಒಳ್ಳೆಯ ರೀತಿಯಲ್ಲಿ ಅವರಿಗೆ ಕಲೆಯ ಬಗ್ಗೆ ತಿಳಿಸುವುದರ ಮೂಲಕ ಅವರಿಗೆ ಅಭಿನಯದ ಎಲ್ಲ ಪಟುಗಳನ್ನು ತಿಳಿಸಲಾಗುವುದು ಎಂದರು.