ಹುಲಿವೇಷ ಕಲಿಯಲು ಬಂದ ಬಾಲಕಿಯ ಮೇಲೆ ಕುಖ್ಯಾತ ರೌಡಿಯಿಂದ ಅತ್ಯಾಚಾರ

ಭಾನುವಾರ, 13 ಜನವರಿ 2019 (07:27 IST)
ಮಂಗಳೂರು : ಹುಲಿವೇಷ ಕಲಿಯಲು ಬಂದ ಬಾಲಕಿಯ ಮೇಲೆ ಕುಖ್ಯಾತ ರೌಡಿಶೀಟರ್ ಮೂರು ದಿನಗಳ ಕಾಲ ಅತ್ಯಾಚಾರ ಎಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.


ಮಂಗಳೂರಿನ ಕೆಲವು ಅಪರಾಧ ಪ್ರಕರಣಗಳಲ್ಲಿ ಆರೋಪ ಎದುರಿಸಿದ್ದ ಆಕಾಶಭವನ ಶರಣ್ ಎಂಬ ಕುಖ್ಯಾತ ರೌಡಿ ಹುಲಿವೇಷ ತರಬೇತಿ ನೀಡುತ್ತಿದ್ದ. ಈ ತರಬೇತಿಗೆಂದು ಈತನ ಬಳಿ ಬಂದ ಬಾಲಕಿಯನ್ನು ಮಂಗಳೂರಿನ ಲಾಡ್ಜ್ ಒಂದಕ್ಕೆ ಕರೆದುಕೊಂಡು ಹೋಗಿ ಮೂರು ದಿನಗಳ ಕಾಲ ಕೂಡಿ ಹಾಕಿ ಅತ್ಯಾಚಾರ ಎಸಗಿದ್ದಾನೆ.


ಈ ಘಟನೆಯ ಬಗ್ಗೆ ಬಾಲಕಿ ದೂರು ದಾಖಲಿಸಿದ್ದು, ರೌಡಿ ಶರಣ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಶಾಲಾ ಮಕ್ಕಳ ಬಿಸಿಯೂಟದ ಅಕ್ಕಿಯಲ್ಲಿ ಪ್ಲಾಸ್ಟಿಕ್​ ಅಕ್ಕಿ ಪತ್ತೆ