Select Your Language

Notifications

webdunia
webdunia
webdunia
webdunia

ಹೊಟೇಲ್ ತರಬೇತಿ ವಿದ್ಯಾರ್ಥಿನಿಯ ಮೇಲೆ ಹೋಟೆಲ್​ ನೌಕರನಿಂದ ಅತ್ಯಾಚಾರ

ಹೊಟೇಲ್ ತರಬೇತಿ ವಿದ್ಯಾರ್ಥಿನಿಯ ಮೇಲೆ ಹೋಟೆಲ್​ ನೌಕರನಿಂದ ಅತ್ಯಾಚಾರ
ಬೆಂಗಳೂರು , ಗುರುವಾರ, 27 ಡಿಸೆಂಬರ್ 2018 (12:00 IST)
ಬೆಂಗಳೂರು : ಹೋಟೆಲ್​ನಲ್ಲಿ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಮದ್ಯಪಾನ ಮಾಡಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಹೋಟೆಲ್​ ನೌಕರನೊರ್ವನನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.


ಅಸ್ಸೋಂ ಮೂಲದ ಹಯಾನ್ ಎಂಬಾತ ಬಂಧಿತ ಆರೋಪಿಯಾಗಿದ್ದು, ರಿಚ್ಮಂಡ್ ರಸ್ತೆಯ ಪ್ರತಿಷ್ಠಿತ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ  ಅದೇ ಹೋಟೆಲ್​ನಲ್ಲಿ ತರಬೇತಿ ಪಡೆಯುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿನಿಯೊಬ್ಬಳ ಜೊತೆ ಸ್ನೇಹ ಬೆಳೆಸಿಕೊಂಡಿದ್ದ.


ಇತ್ತೀಚೆಗೆ ತನ್ನ ಮನೆಯಲ್ಲಿ ನಡೆದ ಪಾರ್ಟಿಯೊಂದಕ್ಕೆ  ವಿದ್ಯಾರ್ಥಿನಿಯನ್ನು ಆಹ್ವಾನಿಸಿ  ಅಂದು ಆಕೆಗೆ ಬಲವಂತವಾಗಿ ಮದ್ಯಪಾನ ಮಾಡಿಸಿದ.  ತಡರಾತ್ರಿಯವರೆಗೂ ಪಾರ್ಟಿ ನಡೆದಿದ್ದರಿಂದ ಆಕೆ ಆತನ ಮನೆಯಲ್ಲೇ ಉಳಿದುಕೊಂಡಿದ್ದಳು. ಆದರೆ ಆಕೆ ನಿದ್ರೆ ಮಾಡುತ್ತಿದ್ದ ಸಮಯದಲ್ಲಿ ರಾತ್ರಿ 1.30ರ ಸುಮಾರಿಗೆ ಹಯಾನ್ ಆಕೆಯ ರೂಂಗೆ ನುಗ್ಗಿದ. ಆಗ  ಆಕೆಗೆ ಎಚ್ಚರವಾದ ಕಾರಣ ಕಿರುಚಿಕೊಂಡಿದ್ದಕ್ಕೆ ರಕ್ತ ಬರುವಂತೆ ಆಕೆಯ ಕುತ್ತಿಗೆಗೆ ಕಚ್ಚಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಆಕೆಯ ಮೇಲೆ  ಅತ್ಯಾಚಾರವೆಸಗಿದ.


ಈ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆ ಇದೀಗ ಹಯಾನ್ ವಿರುದ್ಧ ಅಶೋಕ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಐಪಿಸಿ ಸೆಕ್ಷನ್ 376ರಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಗಳ ಗುರುವಂದನಾ ಕಾರ್ಯಕ್ರಮದ ಹಿನ್ನಲೆ; ಇಂದು ಉಡುಪಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿ