Select Your Language

Notifications

webdunia
webdunia
webdunia
webdunia

ಈ ಜಿಲ್ಲೆಯಲ್ಲಿ ಶುರುವಾಯಿತು ರಾಜ್ಯದ 2 ನೇ 24X7 ಟೆಲಿ ಐಸಿಯು

ಈ ಜಿಲ್ಲೆಯಲ್ಲಿ ಶುರುವಾಯಿತು ರಾಜ್ಯದ 2 ನೇ 24X7 ಟೆಲಿ ಐಸಿಯು
ಕಲಬುರಗಿ , ಸೋಮವಾರ, 15 ಜೂನ್ 2020 (21:19 IST)
ರಾಜ್ಯದ 2 ನೇ 24X7 ಟೆಲಿ ಐಸಿಯುಗೆ ಆನ್‌ಲೈನಿನಲ್ಲೇ ಚಾಲನೆ ನೀಡಲಾಗಿದೆ.

ಗುಲ್ಬರ್ಗ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ (ಜಿಮ್ಸ್‌)ನಲ್ಲಿ ಕರ್ನಾಟಕದ ಎರಡನೇ  24X7 ಟೆಲಿ ಐಸಿಯು ಸೇವೆಗೆ ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ, ಆನ್‌ಲೈನ್‌  ಮೂಲಕ ಬೆಂಗಳೂರಿನಲ್ಲಿ ಚಾಲನೆ ನೀಡಿದರು.

ಎಸಿಟಿ (ಆಕ್ಷನ್‌ ಕೊವಿಡ್‌-19 ಟೀಮ್‌) ಗ್ರಾಂಟ್ಸ್‌ ನೆರವಿನೊಂದಿಗೆ ಕರ್ನಾಟಕ ಸರ್ಕಾರ ಜಿಮ್ಸ್‌ನಲ್ಲಿ ಕರ್ನಾಟಕದ ಎರಡನೇ  24*7 ಟೆಲಿ ಐಸಿಯು ಸೇವೆ ಆರಂಭಿಸಿದೆ. ರಾಜ್ಯಾದ್ಯಂತ  ಆಸ್ಪತ್ರೆಗಳಲ್ಲಿ ಕ್ಲೌಡ್‌ಫಿಸಿಷಿಯನ್‌ನ ಸೇವೆ  ಬಳಸಿಕೊಳ್ಳುವುದರಿಂದ ಗರಿಷ್ಠ ಸಂಖ್ಯೆಯ ರೋಗಿಗಳಿಗೆ ಐಸಿಯು ಚಿಕಿತ್ಸೆ ಸೌಲಭ್ಯ ದೊರೆಯಲು ಸಾಧ್ಯ ಎಂದರು.

ರಾಜ್ಯದಲ್ಲಿ ಮೊದಲ ಟೆಲಿ ಐಸಿಯು ಸೌಲಭ್ಯ ಪಡೆದದ್ದು ರಾಮನಗರದ ಜಿಲ್ಲಾ ಆಸ್ಪತ್ರೆ.  ಜಿಮ್ಸ್‌ ಈ ಸೇವೆ ಪಡೆಯುತ್ತಿರುವ ರಾಜ್ಯದ ಎರಡನೇ ಆಸ್ಪತ್ರೆ.  



Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸ್ ಕಾನ್ಸಟೇಬಲ್ ಗೆ ಕೊರೊನಾ ವೈರಸ್