Publish Date: Mon, 29 Oct 2018 (15:27 IST)
Updated Date: Mon, 29 Oct 2018 (15:30 IST)
ಎಂಟು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕ ತೃತಿಯ ಲಿಂಗಿಯಾಗಿ ಬದಲಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.
ಸಕ್ಕರೆ ನಾಡು ಮಂಡ್ಯದಲ್ಲಿ ಈ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಹಕ್ಕಿಮಂಚನಹಳ್ಳಿಯ ಚಂದನ್ ಕುಮಾರ್ (16) ತೃತೀಯ ಲಿಂಗಿಯಾಗಿ ಪರಿವರ್ತನೆಗೊಂಡು ಪತ್ತೆಯಾಗಿದ್ದಾನೆ.
ಬೆಂಗಳೂರಿನ ತನ್ನ ಚಿಕ್ಕಮ್ಮನ ಮನೆಯಲ್ಲಿ ಇದ್ದುಕೊಂಡು ವಿದ್ಯಾನಗರದ ಬಿಬಿಎಂಪಿ ಹೈಸ್ಕೂಲ್ ನಲ್ಲಿ ಹತ್ತನೇ ತರಗತಿ ವಿದ್ಯಾಬ್ಯಾಸ ಮಾಡತ್ತಿದ್ದ. 8 ತಿಂಗಳ ಹಿಂದೆ ರಜೆಗೆಂದು ಸ್ವಗ್ರಾಮ ಹಕ್ಕಿಮಂಚನಹಳ್ಳಿಗೆ ಬಂದು, ರಜೆ ಮುಗಿದ ಬಳಿಕ ಪೋಷಕರು ಕೆ.ಆರ್.ಪೇಟೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಬೆಂಗಳೂರಿಗೆ ಚಂದನ್ ಅನ್ನ ಬಸ್ ಹತ್ತಿಸಿದ್ರು.
ಆದ್ರೆ ಅಂದಿನಿಂದ ಚಂದನ್ ನಾಪತ್ತೆಯಾಗಿದ್ದ. ಆತನ ಪೋಷಕರು ಕೆ.ಆರ್.ಪೇಟೆ ಪೊಲೀಸ್ ಠಾಣೆಗೆ ನಾಪತ್ತೆ ದೂರು ದಾಖಲಿಸಿದ್ರು. ಆದ್ರೆ ಕೆ.ಆರ್.ಪೇಟೆ ಪಟ್ಟಣದ ಬಿ.ಬಿ.ರಸ್ತೆಯ ಅಂಗಡಿಗಳಲ್ಲಿ ಇಬ್ಬರು ಮಂಗಳಮುಖಿಯರೊಂದಿಗೆ ಭಿಕ್ಷಾಟನೆ ಮಾಡುತ್ತಿದ್ದ ವೇಳೆ ಪತ್ತೆಯಾಗಿದ್ದಾನೆ. ಗ್ರಾಮದ ಕೆಲವರು ಚಂದನ್ ಅನ್ನು ಗುರುತಿಸಿ ಮಾತನಾಡಲು ಪ್ರಯತ್ನಿಸಿದ್ದಾರೆ. ಆದ್ರೆ ಇದನ್ನ ಗಮನಿಸಿದ ಜೊತೆಯಲ್ಲಿದ್ದ ಮಂಗಳಮುಖಿಯರು ಚಂದನ್ ನನ್ನು ಆಟೋದಲ್ಲಿ ಕರೆದೋಯ್ಯಲು ಯತ್ನಿಸಿದ್ದಾರೆ. ಆದ್ರೆ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಇಬ್ಬರು ಮಂಗಳ ಮುಖಿರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪೋಷಕರು ಮಾತ್ರ ತಮ್ಮ ಮಗನನ್ನು ಮಂಗಳಮುಖಿಯರೇ ಅಪಹರಿಸಿ ಲಿಂಗ ಪರಿವರ್ತನೆ ಮಾಡಿಸಿದ್ದಾರೆಂದು ಆರೋಪಿಸುತ್ತಿದ್ದಾರೆ.