Select Your Language

Notifications

webdunia
webdunia
webdunia
webdunia

ಮಧ್ಯಪಾನ ಮಾಡಿ ಕ್ಲಾಸ್ ಗೆ ಬಂದರೆಂದು ಪ್ರಿನ್ಸಿಪಾಲ್ ಬೈದಿದ್ದಕ್ಕೆ ಈ ವಿದ್ಯಾರ್ಥಿಗಳು ಮಾಡಿದ್ದೇನು ಗೊತ್ತಾ?!

ಮಧ್ಯಪಾನ ಮಾಡಿ ಕ್ಲಾಸ್ ಗೆ ಬಂದರೆಂದು ಪ್ರಿನ್ಸಿಪಾಲ್ ಬೈದಿದ್ದಕ್ಕೆ ಈ ವಿದ್ಯಾರ್ಥಿಗಳು ಮಾಡಿದ್ದೇನು ಗೊತ್ತಾ?!
ಬೆಂಗಳೂರು , ಶುಕ್ರವಾರ, 26 ಅಕ್ಟೋಬರ್ 2018 (09:05 IST)
ಬೆಂಗಳೂರು: ಮಧ್ಯಪಾನ ಮಾಡಿ ಕಾಲೇಜು ತರಗತಿಗೆ ಬಂದ ಇಬ್ಬರು ವಿದ್ಯಾರ್ಥಿಗಳಿಗೆ ಪ್ರಿನ್ಸಿಪಾಲ್ ಬೈದರೆಂದು ಅವಮಾನ ತಾಳಲಾರದೆ ಕಾಲೇಜು ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಬೆಂಗಳೂರಿನ ಜಾಲಹಳ್ಳಿಯ ಖಾಸಗಿ ಕಾಲೇಜೊಂದರಲ್ಲಿ ಈ ಘಟನೆ ನಡೆದಿದೆ. ಕೂಡಲೇ ಯುವಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಬ್ಬರು ವಿದ್ಯಾರ್ಥಿಗಳು ಪಾನಮತ್ತರಾಗಿ ಬಂದಿದ್ದನ್ನು ಗಮನಿಸಿದ ಶಿಕ್ಷಕರು ಪ್ರಿನ್ಸಿಪಾಲರಿಗೆ ದೂರು ನೀಡಿದ್ದರು. ಇವರನ್ನು ಕರೆಸಿ ಚೆನ್ನಾಗಿ ಬೈದ ಪ್ರಾಂಶುಪಾಲರು ಮತ್ತೆ ತಪ್ಪು ಮರುಕಳಿಸಿದರೆ ತಕ್ಕ ಶಿಕ್ಷೆ ಎದುರಿಸಬೇಕಾದೀತು ಎಂದು ಎಚ್ಚರಿಸಿದ್ದರು. ಘಟನೆಯಿಂದ ಅವಮಾನಕ್ಕೊಳಗಾದ ವಿದ್ಯಾರ್ಥಿಗಳು ಅದೇ ಕಾಲೇಜಿನ ಕಟ್ಟಡದಿಂದ ಜಿಗಿದಿದ್ದಾರೆ. ಅದೃಷ್ಟವಶಾತ್ ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದರಿಂದ ಪ್ರಾಣ ಉಳಿದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳಿಗೆ ಬರೀ ಕೇಕ್, ಕೋಲಾ ಕುಡಿಸಿದ ತಪ್ಪಿಗೆ ಜೈಲಿಗೆ ಹೋದ ಅಪ್ಪ!