ಶಾಲೆಯ ಬಾತ್ ರೂಂನಲ್ಲಿ ವಿದ್ಯಾರ್ಥಿನಿಯರಿಬ್ಬರು ಎಸಗುತ್ತಿದ್ದಾರಂತೆ ಈ ಭಯಾನಕ ಕೃತ್ಯ

ಶನಿವಾರ, 27 ಅಕ್ಟೋಬರ್ 2018 (08:44 IST)
ಫ್ಲೋರಿಡಾ: ಶಾಲೆಗೆ ಶಸ್ತ್ತಾಸ್ರ್ತಗಳನ್ನು ತೆಗೆದುಕೊಂಡು ಹೋಗಿ ಶಾಲೆಯ ಕಾರ್ಯಚಟುವಟಿಕೆಗೆ ಅಡ್ಡಿ ಪಡಿಸುತ್ತಿರುವ ಆರೋಪದ ಮೇಲೆ ಸೆಂಟ್ರಲ್ ಫ್ಲೋರಿಡಾದ ಬಾರ್ಟೊ ಮಿಡಲ್ ಸ್ಕೂಲ್ ನ 11 ಹಾಗೂ 12 ವರ್ಷದ ಇಬ್ಬರು ವಿದ್ಯಾರ್ಥಿನಿಯರನ್ನು ಬಂಧಿಸಿರುವುದಾಗಿ ಬಾರ್ಟೊವ್ ಪೊಲೀ‍ಸ್ ಅಧಿಕಾರಿ ಜೋ ಹಾಲ್ ಪತ್ರಿಕಾಗೋಷ್ಠಿಯಲ್ಲಿ  ತಿಳಿಸಿದ್ದಾರೆ.


ಆದರೆ ವಿಚಾರಣೆಯ ವೇಳೆ ಅವರಿಬ್ಬರು ಹೇಳಿದ ಸತ್ಯವನ್ನು ಕೇಳಿ ಪೊಲೀಸರೇ ದಂಗಾಗಿದ್ದಾರಂತೆ. ಹೌದು ಈ ಬಾಲಕಿಯರಿಬ್ಬರು ಸೈತಾನ್ ನ ಆರಾಧಕರಾಗಿದ್ದು, ಶಾಲೆಯ ಬಾತ್ ರೂಂನಲ್ಲಿ ವಿದ್ಯಾರ್ಥಿಗಳನ್ನು ಕೊಂದು ಅವರ ರಕ್ತವನ್ನು ಕುಡಿಯುತ್ತಿದ್ದರಂತೆ, ಅಷ್ಟೇ ಅಲ್ಲದೇ ಕೊಂದ ವಿದ್ಯಾರ್ಥಿಗಳ ಮಾಂಸವನ್ನು ತಿನ್ನುತ್ತಿದ್ದಾರಂತೆ.


ಇವರು ಹೀಗೆ 15 ಮಂದಿ ವಿದ್ಯಾರ್ಥಿಗಳನ್ನು ಕೊಂದು ಅವರ ರಕ್ತವನ್ನು ಕುಡಿಯಲು ಯೋಜನೆ ರೂಪಿಸಿದ್ದರಂತೆ. ಆದರೆ ಈಗಾಗಲೇ ಕೊಲೆಯಾದ ವಿದ್ಯಾರ್ಥಿನಿಯ ಹೆತ್ತವರು ಶಾಲೆಗೆ ಕರೆ ಮಾಡಿ ತಮ್ಮ ಮಗಳು ಕಾಣೆಯಾಗಿರುವ ಬಗ್ಗೆ ತಿಳಿಸಿದ್ದಾರೆ. ಆಗ ಇವರಿಬ್ಬರ ಈ ಭಯಾನಕ ಯೋಜನೆ ಬೆಳಕಿಗೆ ಬಂದಿದೆ ಎಂಬುದಾಗಿ ಪೊಲೀ‍ಸ್ ಅಧಿಕಾರಿ ಜೋ ಹಾಲ್ ಪತ್ರಿಕಾಗೋಷ್ಠಿಯಲ್ಲಿ  ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮೀ ಟೂ ಅಭಿಯಾನದ ಬಗ್ಗೆ ಕಾಂಗ್ರೆಸ್ ಶಾಸಕನ ವಿವಾದಾತ್ಮಕ ಹೇಳಿಕೆ