Publish Date: Thu, 06 Feb 2020 (20:36 IST)
Updated Date: Thu, 06 Feb 2020 (20:38 IST)
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ರಚನೆಗೆ ಕೇಂದ್ರ ಸರಕಾರ ಮುಂದಾಗಿ ಅದರ ಘೋಷಣೆ ಮಾಡಿರೋದಕ್ಕೆ ಶಿವಸೇನೆ ಕ್ಯಾತೆ ತೆಗೆದಿದೆ.
ಬಿಜೆಪಿ ಹಾಗೂ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿರುವ ಶಿವಸೇನೆಯು ಟ್ರಸ್ಟ್ ರಚನೆ ಮಾಡೋ ವಿಷಯವನ್ನೂ ಬಿಜೆಪಿ ರಾಜಕೀಯಗೊಳಿಸುತ್ತಿದೆ. ಇಂಥ ನಡೆಯನ್ನು ನಿರೀಕ್ಷೆ ಮಾಡಿರಲಿಲ್ಲ ಅಂತ ತಿಳಿಸಿದೆ.
ದೆಹಲಿ ಚುನಾವಣೆಗಾಗಿ ಶ್ರೀ ರಾಮಮಂದಿರ ಟ್ರಸ್ಟ್ ವಿಷಯವನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ. ರಾಮನ ಹೆಸರಲ್ಲಿ ಬಿಜೆಪಿ ನಾಲ್ಕೈದು ಸ್ಥಾನಗಳನ್ನು ಹೆಚ್ಚಿಗೆ ಗೆಲುವು ಸಾಧಿಸಬಹುದು ಅಷ್ಟೇ ಅಂತ ಶಿವಸೇನೆ ವ್ಯಂಗ್ಯವಾಡಿದೆ.