Publish Date: Thu, 06 Feb 2020 (20:18 IST)
Updated Date: Thu, 06 Feb 2020 (20:20 IST)
ಕೆಲವು ದಿನಗಳವರೆಗೆ ನಡೆದ ಬಿಸಿ ಬಿಸಿ ಚರ್ಚೆ, ಕುತೂಹಲದ ಬಳಿಕ ಕೊನೆಗೂ 10 ಜನರಿಗೆ ಸಚಿವ ಸ್ಥಾನ ಕೊಡಲಾಗಿದೆ. ಆದರೆ ಖಾತೆ ಹಂಚಿಕೆ ಮಾಡೇ ಇಲ್ಲ.
ಬೈ ಎಲೆಕ್ಷನ್ ನಲ್ಲಿ ಗೆದ್ದವರಲ್ಲಿ 10 ಜನರನ್ನು ಸಚಿವರನ್ನಾಗಿ ಮಾಡಲಾಗಿದೆ. ಆದರೆ ಖಾತೆ ಹಂಚಿಕೆ ಕಗ್ಗಂಟು ಮುಂದುವರಿಯೋ ಲಕ್ಷಣಗಳಿವೆ.
ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದೋದರಿಗೆ ಫೆಬ್ರವರಿ 8 ರ ಒಳಗಾಗಿ ಸಚಿವ ಸ್ಥಾನದ ಖಾತೆಗಳನ್ನು ಹಂಚಿಕೆ ಮಾಡೋದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.
ಮೂಲ ಬಿಜೆಪಿಗರಲ್ಲಿ ಮೂವರನ್ನು ಸಚಿವರನ್ನಾಗಿಸುವಂತೆ ಹೈಕಮಾಂಡ್ ಜೊತೆ ಚರ್ಚಿಸಲಾಗುವುದು ಅಂತ ಸಿಎಂ ಹೇಳಿದ್ದಾರೆ.