Publish Date: Thu, 06 Feb 2020 (20:06 IST)
Updated Date: Thu, 06 Feb 2020 (20:08 IST)
ಬಿಜೆಪಿ ನೇತೃತ್ವದ ಸರಕಾರದಲ್ಲಿ ವಲಸೆ ಬಂದವರಲ್ಲಿ 10 ಜನರನ್ನು ಮಂತ್ರಿ ಮಾಡಿರೋದು ಮೂಲ ಬಿಜೆಪಿಗರನ್ನು ಕೆರಳಿಸಿದೆ.
ರಾಜ್ಯ ಸರಕಾರದ ಸಚಿವ ಸಂಪುಟ ವಿಸ್ತರಣೆ ಕುರಿತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡಿದ್ದಾರೆ.
ಬಿಜೆಪಿಯನ್ನು ಕಟ್ಟಿ ಬೆಳೆಸಿ ಗೆದ್ದು ಶಾಸಕರಾಗಿರುವ 105 ಜನರು ಕಡಬು ತಿನ್ನುತ್ತಾ ಕುಡೋದಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮುಂದಿದೆ ಸಮಸ್ಯೆಗಳ ಹಬ್ಬ ಅಂತ ವ್ಯಂಗ್ಯವಾಡಿದ್ದಾರೆ.
ಏನೇನೋ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಜನರು ಎಲ್ಲವನ್ನೂ ನೋಡುತ್ತಿದ್ದಾರೆ. ಈಗ ಸೈಲೆಂಟ್ ಆಗಿದ್ದರೂ ಮುಂದೊಂದು ದಿನ ಬಿಜೆಪಿ ಶಾಸಕರಲ್ಲೇ ದೊಡ್ಡ ಪ್ರಮಾಣದ ಅಸಮಧಾನ ಸ್ಫೋಟಗೊಳ್ಳಲಿದೆ ಅಂತ ಪರೋಕ್ಷವಾಗಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.