Publish Date: Thu, 06 Feb 2020 (19:52 IST)
Updated Date: Thu, 06 Feb 2020 (19:54 IST)
ಬಹುದಿನಗಳಿಂದ ಕುತೂಹಲ ಕೆರಳಿಸಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗಿದೆ. ಬೈ ಎಲೆಕ್ಷನ್ ನಲ್ಲಿ ಗೆದ್ದ 10 ಜನರನ್ನು ಮಂತ್ರಿ ಮಾಡಲಾಗಿದೆ. ನೂತನ ಮಂತ್ರಿಗಳು ಈಗಲೂ ಅನರ್ಹರೇ ಆಗಿದ್ದಾರೆ ಅಂತ ಮಾಜಿ ಸಿಎಂ ಟೀಕೆ ಮಾಡಿದ್ದಾರೆ.
ಮೈತ್ರಿ ಸರಕಾರ ಪತನಕ್ಕೆ ಕಾರಣವಾಗಿರೋ ಅನರ್ಹ ಶಾಸಕರ ವಿರುದ್ಧ ಟ್ವಿಟ್ ಮಾಡಿರೋ ಸಿದ್ದರಾಮಯ್ಯ, ಸಂಪುಟ ವಿಸ್ತರಣೆ ಬಗ್ಗೆ ಸಂತೋಷ ಪಡುವುದೇನಿಲ್ಲ. ತಾಂತ್ರಿಕವಾಗಿ ಚುನಾವಣೆಯಲ್ಲಿ ಗೆದ್ದು ಶಾಸಕರಾದರೂ ನೈತಿಕವಾಗಿ ಸೋತಿರುವ ಅವರು ಈಗಲೂ ಅನರ್ಹರೇ ಆಗಿದ್ದಾರೆ. ನೂತನ ಸಚಿವರಿಗೆ ಒಳ್ಳೆಯದಾಗಲಿ. ಹೀಗಂತ ಟ್ವಿಟ್ ಮಾಡಿದ್ದಾರೆ.
ಮುಖ್ಯಮಂತ್ರಿಯವರ ಕೈಕಾಲನ್ನು ಹೈಕಮಾಂಡ್ ಕಟ್ಟಿಹಾಕಿ ತಲೆಗೆ ಮಾತ್ರ ಕಿರೀಟ ಇಟ್ಟು ಕೂರಿಸಿದ್ದಾರೆ. ಅವರ ಅಸಹಾಯಕತೆಯನ್ನು ನೋಡಿದರೆ ಅಯ್ಯೋ ಪಾಪ ಅನಿಸುತ್ತೆ.
ಮಾಡಿದುಣ್ಣೋ ಮಹರಾಯ ಅಂತಾನೂ ಸಿದ್ದರಾಮಯ್ಯ ಟ್ವಿಟ್ ಮಾಡೋ ಮೂಲಕ ತಿವಿದಿದ್ದಾರೆ.