Publish Date: Wed, 22 Jan 2020 (18:48 IST)
Updated Date: Wed, 22 Jan 2020 (18:50 IST)
ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ನೀಡಲು ಸಿದ್ಧತೆ ನಡೆದಿರುವ ಹೊತ್ತಿನಲ್ಲೇ ನೂತನ ಟ್ರಸ್ಟ್ ರಚನೆಯಾಗುತ್ತಿದೆ.
ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಮುಂಬರುವ ಎರಡ್ಮೂರು ತಿಂಗಳಲ್ಲಿ ಶುರುವಾಗಲಿದೆ ಅಂತ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆ ನೀಡಿರೋ ಬೆನ್ನಲ್ಲೇ ಟ್ರಸ್ಟ್ ರಚನೆ ಕಾರ್ಯ ವೇಗ ಪಡೆದುಕೊಂಡಿದೆ.
ಕೇಂದ್ರ ಗೃಹ ಸಚಿವಾಲಯದಿಂದ ಟ್ರಸ್ಟ್ ರಚನೆ ಬಗ್ಗೆ ಹಾಗೂ ಅದರ ಕಾರ್ಯ ವಿಧಾನ ಸೇರಿದಂತೆ ಮೊದಲಾದ ಅಂಶಗಳ ಬಗ್ಗೆ ಅಂತಿಮ ಮುದ್ರೆ ದೊರಕಿದೆ ಎನ್ನಲಾಗಿದೆ.
ಹೀಗಾಗಿ ಅತೀ ಶೀಘ್ರದಲ್ಲೇ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಶುರುವಾಗೋದಕ್ಕೆ ದಿನಗಣನೆ ಪ್ರಾರಂಭವಾದಂತಾಗಿದೆ.