ಅಯೋಧ್ಯೆ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟ ಮಾಡಿದ ಬೆನ್ನಲ್ಲೇ ರಾಮ ಜನ್ಮಭೂಮಿಯಲ್ಲಿ ರಾಮ್ ಲಲ್ಲಾನ ಮಂದಿರ ನಿರ್ಮಾಣ ಕಾರ್ಯಕ್ಕೆ ವೇಗ ದೊರಕಿಸಲಾಗಿದೆ.
ಕಳೆದ ಮೂರು ದಶಕಗಳಿಂದ ದೇಗುಲ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆದರೆ ಈವೆರೆಗೂ ಶೇಕಡಾ ಅರ್ಧದಷ್ಟು ಕೆತ್ತನೆ ಕೆಲಸ ಪೂರ್ಣಗೊಂಡಿಲ್ಲ.
100 ಕ್ಕೂ ಹೆಚ್ಚು ಕಂಬಗಳನ್ನು ಹಾಗೂ ಕೆಲವು ಪ್ರದೇಶದ ಮೇಲ್ಛಾವಣಿ ಕೆತ್ತಬೇಕಿದೆ.
ಅಂದಾಜು 50 ಕೋಟಿ ರೂ. ವೆಚ್ಚದಲ್ಲಿ ಶ್ರೀರಾಮ ಮಂದಿರ ನಿರ್ಮಾಣಗೊಳ್ಳಲಿದ್ದು, ರಾಮ ಮಂದಿರ ಸಂಪೂರ್ಣವಾಗಬೇಕಾದರೆ ಇನ್ನೂ ನಾಲ್ಕೈದು ವರ್ಷಗಳು ಕಾಯಲೇಬೇಕಿದೆ.