Publish Date: Sat, 09 Nov 2019 (20:44 IST)
Updated Date: Sat, 09 Nov 2019 (20:46 IST)
ಅಯೋಧ್ಯೆ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟ ಮಾಡಿದ ಬೆನ್ನಲ್ಲೇ ಕೋರ್ಟ್ ತೀರ್ಪನ್ನು ಯೋಗ ಗುರು ಬಾಬಾ ರಾಮ್ ದೇವ್ ಸ್ವಾಗತಿಸಿದ್ದಾರೆ.
ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಮಾಡುವ ಕೆಲಸಕ್ಕೆ ಹಿಂದು ಬಾಂಧವರು ಹೆಲ್ಪ್ ಮಾಡಬೇಕು ಎಂದಿದ್ದಾರೆ.
ಸುಪ್ರೀಂಕೋರ್ಟ್ ಐತಿಹಾಸಿಕ ನಿರ್ಣಯ ನೀಡಿದೆ. ರಾಮ ಮಂದಿರವನ್ನು ನಿರ್ಮಾಣ ಮಾಡಲಾಗುತ್ತದೆ. ಮಸೀದಿಗಾಗಿ ಬೇರೆ ಸ್ಥಳ ಕೊಡುವುದು ಸರಿಯಾದ ಕ್ರಮ ಎಂದಿದ್ದಾರೆ.
ಭಾರತವು ಮಂದಿರ-ಮಸೀದಿಗಳಿಂದ ಹೊರಬಂದು ವಿಶ್ವದಲ್ಲಿ ದೊಡ್ಡ ಶಕ್ತಿಯಾಗಬೇಕಿದೆ ಎಂದಿದ್ದಾರೆ.