Webdunia - Bharat's app for daily news and videos

Install App

ಶ್ರೀಲೀಲಾ ಐಷಾರಾಮಿ ಜೀವನದಿಂದ ನಿರ್ಮಾಪಕರಿಗೆ ನಷ್ಟ.?

Webdunia
ಭಾನುವಾರ, 18 ಸೆಪ್ಟಂಬರ್ 2022 (14:14 IST)
2019ರಲ್ಲಿ ಕಿಸ್  ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಂದಿನಿ ಎಂದು ಪರಿಚಯವಾದ ಶ್ರೀಲೀಲಾ ಎರಡನೇ ಸಿನಿಮಾವೂ ಸೂಪರ್ ಹಿಟ್. ಭರಾಟೆ ಚಿತ್ರದಲ್ಲಿ ಶ್ರೀಮುರಳಿ ಜೊತೆ ನಟಿಸಿದ ನಂತರ ತೆಲುಗು ಸಿನಿಮಾ ಕೈ ಸೇರಿತ್ತು. ಪೆಲ್ಲಿ ಸಂದಡಾ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ವಿಫಲವಾಯ್ತು ಆದರೆ ಲೀಲಾ ಬುಟ್ಟಿಗೆ ಸ್ಟಾರ್ ಸಿನಿಮಾಗಳ ಕಥೆ ಬಂದು ಬಿತ್ತು.
ಶ್ರೀಲೀಲಾ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದರೂ ಸಿನಿಮಾ ಮ್ಯಾನೇಜ್ ಮಾಡಲು ಕಾರಣ ಅವರ ತಾಯಿ ಸ್ವರ್ಣಲತಾ.
 
ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ವೈದ್ಯೆ. ಅವರ ಕೈ ಗುಣ ಚೆನ್ನಾಗಿದೆ ಎಂದು ಸಾಮಾನ್ಯರು ಮಾತ್ರವಲ್ಲ ಸ್ಟಾರ್ ನಟಿಯರು ಚಿಕಿತ್ಸೆ ಪಡೆಯುತ್ತಾರೆ. ಹೀಗಾಗಿ ಲೀಲಾ ಕೂಡ ಡಾಕ್ಟರ್ ಆಗಬೇಕು ಅನ್ನೋದು ಅವರ ಫ್ಯಾಮಿಲಿ ಕನಸು. ಸಿನಿಮಾ ಪ್ಯಾಶನ್ ಆಗಿರುವ ಕಾರಣ ಎರಡನ್ನೂ ಸಮವಾಗಿ ನಿಭಾಯಿಸುತ್ತಿದ್ದಾರೆ. ಸಿನಿಮಾ ಆಯ್ಕೆ ಮಾಡುವುದರಿಂದ ಹಿಡಿದು ಪ್ರತಿಯೊಂದನ್ನು ಲೀಲಾ ತಾಯಿ ಸ್ವರ್ಣಲತಾ ಆಯ್ಕೆ ಮಾಡುವುದು. ಲೀಲಾ ಜೊತೆ ಏನೇ ಮಾತನಾಡಬೇಕಿದ್ದರೂ ತಾಯಿ ಮೂಲಕವೇ ನಡೆಯಬೇಕು.
 
ಇತ್ತೀಚಿಗೆ ಸ್ವರ್ಣಲತಾ ಕೂಡ ವಿವಾದದಲ್ಲಿ ಸಿಲುಕಿಕೊಂಡಿದ್ದರು. ಈಗ ಲೀಲಾ ಬಗ್ಗೆನೂ ಚರ್ಚೆ ಶುರುವಾಗಿದೆ, ಇದಕ್ಕೆ ಕಾರಣವೇ ಹೋಟೆಲ್ ಬೆಲೆ. ಟಾಲಿವುಡ್‌ ಮತ್ತು ಕನ್ನಡ ವೆಬ್‌ ಸೈಟ್‌ವೊಂದು ಮಾಡಿರುವ ವರದಿ ಪ್ರಕಾರ ಲೀಲಾ ಮಾಡುತ್ತಿರುವ ತಪ್ಪು ಮತ್ತು ನಿರ್ಮಾಪಕರು ದೃಷ್ಟಿಯಲ್ಲಿ ನಷ್ಟ ಎಷ್ಟಾಗಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಹೈದರಾಬಾದ್‌ನಲ್ಲಿ ಶ್ರೀಲೀಲಾ ತೆಲುಗು ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ. ಸುಮಾರು 30 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು ಉಳಿದುಕೊಳ್ಳಲು 7 ಸ್ಟಾರ್ ಹೋಟೆಲ್ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 7 ಸ್ಟಾರ್ ಹೋಟೆಲ್‌ನ ರೂಮ್‌ ಬೆಲೆ ದಿನಕ್ಕೆ 22 ಸಾವಿರವಂತೆ. ಟ್ಯಾಕ್ಸ್‌ ಎಲ್ಲವೂ ಸೇರಿದರೆ 30 ದಿನಕ್ಕೆ 6 ಲಕ್ಷಕ್ಕೂ ಹೆಚ್ಚು ಹಣವಾಗುತ್ತದೆ. ಈ ಸಂಪೂರ್ಣ ಚರ್ಚನ್ನು ನಿರ್ಮಾಪಕರೇ ಮಾಡಬೇಕಿರುವ ಕಷ್ಟ ಆಗುತ್ತದೆ ಎನ್ನಲಾಗಿದೆ. ಈಗಷ್ಟೆ ಬೆಳೆಯುತ್ತಿರುವ ನಟಿ ನಿರ್ಮಾಣ ಸಂಸ್ಥೆಗೆ ಇಷ್ಟೊಂದು ನಷ್ಟ ಮಾಡಿದರೆ ಭವಿಷ್ಯ ಹೇಗೆ ಎಂದು ಪ್ರಶ್ನೆ ಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments