Select Your Language

Notifications

webdunia
webdunia
webdunia
webdunia

ಖಾಸಗಿ ಕ್ಲಿನಿಕ್ ನಡೆಸುತ್ತಿರುವ ಸರ್ಕಾರಿ ವೈದ್ಯರ ಮೇಲೆ ಗರಂ ಆದ ಸಚಿವ ಶ್ರೀರಾಮುಲು

ಖಾಸಗಿ ಕ್ಲಿನಿಕ್ ನಡೆಸುತ್ತಿರುವ ಸರ್ಕಾರಿ ವೈದ್ಯರ ಮೇಲೆ ಗರಂ ಆದ ಸಚಿವ ಶ್ರೀರಾಮುಲು
ಚಾಮರಾಜನಗರ , ಬುಧವಾರ, 25 ಸೆಪ್ಟಂಬರ್ 2019 (10:42 IST)
ಚಾಮರಾಜನಗರ : ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ ಆರೋಗ್ಯ ಸಚಿವ ಶ್ರೀರಾಮುಲು ಆಸ್ಪತ್ರೆಯ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.



ಜಿಲ್ಲಾಸ್ಪತ್ರೆಯಲ್ಲಿ ಇರುವ ಸಮಸ್ಯೆ, ಕುಂದುಕೊರತೆಗಳನ್ನು ಆಲಿಸಲು ಸಚಿವ ಶ್ರೀರಾಮುಲು ಮಂಗಳವಾರ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಇಂದು ಬೆಳಿಗ್ಗೆ ಆಸ್ಪತ್ರೆ ಅವರಣದಲ್ಲಿ ಶ್ರೀರಾಮುಲು ಸಿಬ್ಬಂದಿ ಜೊತೆ ಕುಂದುಕೊರತೆ ಸಭೆ ನಡೆಸಿ, ಸಿಬ್ಬಂದಿ ಸಮಸ್ಯೆಗಳನ್ನು ಆಲಿಸಿದ ಸಚಿವರು, ಕೇಂದ್ರ ಸರ್ಕಾರದ ನೂತನ ಯೋಜನೆ ಬಗ್ಗೆ ತಿಳಿಸಿ ಸಂಬಳ ಹೆಚ್ಚಿಸುವ ಬಗ್ಗೆ ಭರವಸೆ ನೀಡಿದರು.


ಅಲ್ಲದೇ ಖಾಸಗಿ ಕ್ಲಿನಿಕ್ ನಡೆಸ್ತಿರುವ ಸರ್ಕಾರಿ ವೈದ್ಯರ ಮೇಲೆ ಸಚಿವ ಶ್ರೀರಾಮುಲು ಗರಂ ಆಗಿದ್ದಾರೆ. ಸರ್ಕಾರಿ ವೈದ್ಯರು ಕ್ಲಿನಿಕ್ ನಡೆಸುವುದು ದೊಡ್ಡ ದಂಧೆಯಾಗಿದೆ. ಅವರು ಎಂತಹ ತಜ್ಞ ವೈದ್ಯರೇ ಆದ್ರೂ ಅವರ ಅವಶ್ಯಕತೆ ನಮಗಿಲ್ಲ. ಖಾಸಗಿ ಕ್ಲಿನಿಕ್ ನಡೆಸುತ್ತಿರುವ ವೈದ್ಯರು ಕೆಲಸ ಬಿಟ್ಟು ಹೋಗಲಿ, ಇಲ್ಲವೇ ನಿವೃತ್ತಿ ತೆಗೆದುಕೊಳ್ಳಿ ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ ಡಿಕೆ ಸುರೇಶ್. ಕಾರಣವೇನು ಗೊತ್ತಾ?