Select Your Language

Notifications

webdunia
webdunia
webdunia
webdunia

ಬಳ್ಳಾರಿಯಿಂದ ವಿಜಯನಗರವನ್ನು ಪ್ರತೇಕಗೊಳಿಸುವ ಬಗ್ಗೆ ಸಚಿವ ಶ್ರೀರಾಮುಲು ಹೇಳಿದ್ದೇನು?

ಬಳ್ಳಾರಿಯಿಂದ ವಿಜಯನಗರವನ್ನು ಪ್ರತೇಕಗೊಳಿಸುವ ಬಗ್ಗೆ ಸಚಿವ ಶ್ರೀರಾಮುಲು ಹೇಳಿದ್ದೇನು?
ಬಳ್ಳಾರಿ , ಶುಕ್ರವಾರ, 20 ಸೆಪ್ಟಂಬರ್ 2019 (15:24 IST)
ಬಳ್ಳಾರಿ : ಬಳ್ಳಾರಿಯಿಂದ ವಿಜಯನಗರವನ್ನು ಪ್ರತೇಕಗೊಳಿಸಿ ಹೊಸ ಜಿಲ್ಲೆಯಾಗಿ ಮಾಡುವ ಬಗ್ಗೆ ಬಿಜೆಪಿ ಪಕ್ಷದವರಿಂದಲೇ ವಿರೋಧ ವ್ಯಕ್ತವಾಗುತ್ತಿದೆ.


ಬಳ್ಳಾರಿಯಿಂದ ಪ್ರತೇಕಗೊಂಡು ವಿಜಯನಗರ ರಾಜ್ಯದ 31 ಜಿಲ್ಲೆಯನ್ನಾಗಿ ರೂಪಿಸುವ ಕುರಿತು ಸರ್ಕಾರದ ಮುಂದೆ ಪ್ರಸ್ತಾಪ ಮಂಡಿಸಿದ್ದು, ಆದರೆ ಇದಕ್ಕೆ ಬಳ್ಳಾರಿ ನಾಯಕರಾದ ಸಚಿವ ಶ್ರೀರಾಮುಲು, ಶಾಸಕ ಸೋಮಶೇಖರ್ ರೆಡ್ಡಿ, ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.


ಈ ಕುರಿತು ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಶ್ರೀರಾಮುಲು, ವಿಜಯನಗರವನ್ನು ಪ್ರತ್ಯೇಕ ಜಿಲ್ಲೆ ಬೇಕು ಎನ್ನುವರರಿದ್ದಾರೆ. ಬೇಡ ಎನ್ನುವವರಿದ್ದಾರೆ. ನನ್ನ ಅಭಿಪ್ರಾಯವನ್ನು ನಾನು ಸಚಿವ ಸಂಪುಟದಲ್ಲಿ ಮಾತನಾಡುವೆ. ಅದಕ್ಕೂ ಮೊದಲು ಸಾಧ್ಯವಾದರೆ ಸಿಎಂ ಅವರೊಂದಿಗೆ ಮಾತನಾಡುವೇ. ಬಳ್ಳಾರಿ ಅಖಂಡ ಜಿಲ್ಲೆಯಾಗಿರಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ನಾವು ಇಡೀ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಈಗಾಗಲೇ ಪ್ರತ್ಯೇಕಗೊಂಡಿರುವ ಹೊಸ ಜಿಲ್ಲೆಗಳು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಿಲ್ಲ. ಹೀಗಾಗಿ ಅಖಂಡ ಬಳ್ಳಾರಿ ಇದ್ದರೆ ಎಲ್ಲ ದೃಷ್ಟಿಯಿಂದಲೂ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

3-4 ತಿಂಗಳಲ್ಲಿ ಬಿಜೆಪಿ ಸರ್ಕಾರ ಪತನ ಎಂದ ಕೋಡಿ ಮಠದ ಶ್ರೀಗಳಿಗೆ ಸವಾಲು ಎಸೆದ ಬಿಜೆಪಿ ಕಾರ್ಯಕರ್ತ