ಹೊಸಪೇಟೆಯನ್ನು ಜಿಲ್ಲೆ ಮಾಡಹೊರಟ ಆನಂದ್ ಸಿಂಗ್ ಗೆ ಬೆಂಬಲ ನೀಡುವೆ- ಕಂಪ್ಲಿ ಶಾಸಕ ಗಣೇಶ್

ಬುಧವಾರ, 18 ಸೆಪ್ಟಂಬರ್ 2019 (10:15 IST)
ಬಳ್ಳಾರಿ : ಹೊಸಪೇಟೆಯನ್ನು ಜಿಲ್ಲೆ ಮಾಡಬೇಕೆಂದು ಹೊರಟ ಅನರ್ಹ ಶಾಸಕ ಆನಂದ್ ಸಿಂಗ್ ಗೆ ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ್ ಬೆಂಬಲ ನೀಡುವುದಾಗಿ ಹೇಳಿದ್ದಾರೆ.ಈ ಕುರಿತು ಸುದ್ದಿಗಾರರೊಂದಿಗೆ  ಮಾತನಾಡಿದ ಗಣೇಶ್ ಅವರು, ಹೊಸಪೇಟೆಯನ್ನು ಹೊಸ ಜಿಲ್ಲೆಯಾಗಿ ಮಾಡಬೇಕು ಎಂದು ಹೊರಟಿರುವ ಅನರ್ಹ ಶಾಸಕ ಆನಂದ್ ಸಿಂಗ್‍ಗೆ ಬೆಂಬಲ ನೀಡುತ್ತೇನೆ. ಇದರ ಜೊತೆಗೆ ನಾವು ಪಕ್ಷಾತೀತವಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.


ಅಲ್ಲದೇ ನಾವು ಜಗಳ ಆಡಿರೋದು ಒಂದು ಕೆಟ್ಟ ಗಳಿಗೆ ಆನಂದ್ ಸಿಂಗ್ ಮತ್ತು ನಮ್ಮ ನಡುವೆ ಭಿನ್ನಾಭಿಪ್ರಾಯ ಇಲ್ಲ. ಕಂಪ್ಲಿ ಕೂಡ ಹೊಸಪೇಟೆಗೆ ಸೇರಿಸಲು ಮನವಿ ಮಾಡುತ್ತೆವೆ ಎಂದು ಅವರು ತಿಳಿಸಿದ್ದಾರೆ.


ಆನಂದ್ ಸಿಂಗ್ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಹೊಸಪೇಟೆಯನ್ನು ಜಿಲ್ಲೆ ಮಾಡಲೇಬೇಕೆಂದು ಮನವಿ ಮಾಡಲಿದ್ದಾರೆ. ಅದಕ್ಕಾಗಿ ಸಕಲ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.


 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧ ಮಠದ ಸ್ವಾಮೀಜಿಯ ಅಕ್ರಮ ಸಂಬಂಧ ಬಟ್ಟ ಬಯಲು