Select Your Language

Notifications

webdunia
webdunia
webdunia
webdunia

ಆ.27 ರಂದು ಮೂಕಾಂಬಿಕಾ ದರ್ಶನಕ್ಕೆ ಶ್ರೀಲಂಕಾ ಪ್ರಧಾನಿ ದಂಪತಿಗಳು

ಆ.27 ರಂದು ಮೂಕಾಂಬಿಕಾ ದರ್ಶನಕ್ಕೆ ಶ್ರೀಲಂಕಾ ಪ್ರಧಾನಿ ದಂಪತಿಗಳು
ಕೊಲ್ಲೂರು: , ಗುರುವಾರ, 24 ಆಗಸ್ಟ್ 2017 (18:34 IST)
ಮೂಕಾಂಬಿಕಾ ದೇವಿಯ ದರ್ಶನ ಪಡೆಯಲು ಆಗಸ್ಟ್ 27 ರಂದು ಶ್ರೀಲಂಕಾ ಪ್ರಧಾನಿ ದಂಪತಿಗಳು ಕೊಲ್ಲೂರಿಗೆ ಆಗಮಿಸಲಿದ್ದಾರೆ ಎಂದು ದೇವಾಲಯದ ವಕ್ತಾರ ಮೂಲಗಳು ತಿಳಿಸಿವೆ.
ಶ್ರೀಲಂಕಾ ಪ್ರಧಾನಿ ವಿಕ್ರಮ‍ ಸಿಂಘೆ, ತಮ್ಮ ಪತ್ನಿಯೊಂದಿಗೆ ನವಚಂಡಿ ಯಾಗಕ್ಕಾಗಿ ಕೊಲ್ಲೂರಿಗೆ ಆಗಮಿಸಲಿದ್ದಾರೆ.   
ಮಧ್ಯಾಹ್ನದ ಬಲಿ ಉತ್ಸವ, ಮಹಾಪೂಜೆಯಲ್ಲೂ ಭಾಗಿಯಾಗಲಿದ್ದಾರೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.
 
ಆಗಸ್ಟ್25 ರಂದು ಬೆಂಗಳೂರಿಗೆ ಆಗಮಿಸುವ ಲಂಕಾ ಪ್ರಧಾನಿ ದಂಪತಿಗಳು ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. 27 ರಂದು ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿನಿಂದ ಕೊಲ್ಲೂರಿಗೆ ತೆರಳಲಿದ್ದಾರೆ  11 ಗಂಟೆ ಸುಮಾರಿಗೆ ಮೂಕಾಂಬಿಕೆ ದೇವಿಯ ದರ್ಶನ ಪಡೆಯಲಿದ್ದಾರೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಮಂತ್ರಿಸ್ಥಾನದ ಆಕಾಂಕ್ಷಿಯಲ್ಲ, ಕೊಟ್ರೆ ನಿಭಾಯಿಸ್ತೇನೆ: ಸಿಎಂ ಇಬ್ರಾಹಿಂ