Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಇನ್ನು ಲಂಕಾದಲ್ಲಿ ರಾಷ್ಟ್ರಗೀತೆ ಹಾಡಲ್ಲ!

ಟೀಂ ಇಂಡಿಯಾ ಇನ್ನು ಲಂಕಾದಲ್ಲಿ ರಾಷ್ಟ್ರಗೀತೆ ಹಾಡಲ್ಲ!
ಕೊಲೊಂಬೊ , ಗುರುವಾರ, 24 ಆಗಸ್ಟ್ 2017 (09:11 IST)
ಕೊಲೊಂಬೊ: ಟೀಂ ಇಂಡಿಯಾ ಸದ್ಯಕ್ಕೆ ಲಂಕಾದಲ್ಲಿ ಟೆಸ್ಟ್, ಏಕದಿನ, ಟಿ20 ಸರಣಿಗಾಗಿ ಬೀಡುಬಿಟ್ಟಿದೆ. ಆದರೆ ಮುಂದಿನ ಪಂದ್ಯಗಳಲ್ಲಿ ರಾಷ್ಟ್ರಗೀತೆ ಹಾಡಲ್ಲವಂತೆ.


ಪ್ರತೀ ಪಂದ್ಯಾರಂಭಕ್ಕೆ ಮೊದಲು ಉಭಯ ದೇಶಗಳ ರಾಷ್ಟ್ರಗೀತೆ ಹಾಡುವುದು ಪದ್ಧತಿ. ಆದರೆ ಭಾರತ ತಂಡ ಮುಂದಿನ ಪಂದ್ಯಗಳಲ್ಲಿ ರಾಷ್ಟ್ರಗೀತೆಗೆ ಸಾಲುಗಟ್ಟಿ ನಿಲ್ಲಲ್ಲ. ಅಂತಹದ್ದೊಂದು ಕಾರ್ಯಕ್ರಮವನ್ನೇ ರದ್ದುಗೊಳಿಸಲಾಗಿದೆ.

ಅದಕ್ಕೆ ಕಾರಣ ಶ್ರೀಲಂಕಾ. ಶ್ರೀಲಂಕಾ ತಂಡದ ಮಾಧ್ಯಮ ವ್ಯವಸ್ಥಾಪಕರು ಈ ಬಗ್ಗೆ ಹೇಳಿಕೆ ನೀಡಿದ್ದು, ‘ನಾವು ಯಾವುದೇ ಸರಣಿಯ ಮೊದಲ ಪಂದ್ಯದಲ್ಲಿ ಮಾತ್ರ  ರಾಷ್ಟ್ರಗೀತೆ ಹಾಡುವ ಪದ್ಧತಿ ಇಟ್ಟುಕೊಂಡಿದ್ದೇವೆ. ಈ ಸರಣಿಯಲ್ಲೂ ಅದೇ ಮುಂದುವರಿಯಲಿದೆ. ಮುಂದೆ ಟಿ 20 ಪಂದ್ಯಕ್ಕೆ ಮೊದಲು ರಾಷ್ಟ್ರಗೀತೆಗೆ ಗೌರವ ಸಲ್ಲಿಸುವ ಕಾರ್ಯಕ್ರಮ ನಡೆಸಲಿದ್ದೇವೆ’ ಎಂದು ಕಾರಣ ವಿವರಿಸಿದ್ದಾರೆ.

ಇದನ್ನೂ ಓದಿ.. ಕನ್ನಡ ಕಿರುತೆರೆ ನಟಿ ರಚನಾ ದುರ್ಮರಣ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಅದೆಲ್ಲಾ ಹಳೇ ಕತೆ ಇನ್ನೂ ಧೋನಿ ಮೊದಲಿನ ಹಾಗೆ ಆಡಲಾಗದು’