Select Your Language

Notifications

webdunia
webdunia
webdunia
Monday, 7 April 2025
webdunia

ಮತ್ತೆ ವಿರಾಟ್ ಕೊಹ್ಲಿಯ ಜಲಕ್ರೀಡೆ

ವಿರಾಟ್ ಕೊಹ್ಲಿ
ಕೊಲೊಂಬೊ , ಮಂಗಳವಾರ, 22 ಆಗಸ್ಟ್ 2017 (08:33 IST)
ಕೊಲೊಂಬೊ: ಶ್ರೀಲಂಕಾಗೆ ಬಂದಾಗಿನಿಂದ ಟೀಂ ಇಂಡಿಯಾ ನಾಯಕ ಕೊಹ್ಲಿಗೆ ಜಲವಿಹಾರ ಮಾಡುವುದೇ ಕೆಲಸವಾಗಿದೆ. ಮೊದಲ ಏಕದಿನ ಪಂದ್ಯ ಗೆದ್ದ ಖುಷಿಯಲ್ಲಿ ಮತ್ತೆ ಕೊಹ್ಲಿ ಜಾಲಿ ರೈಡ್ ಫೋಟೋ ಸದ್ದು ಮಾಡುತ್ತಿದೆ.

 
ದಂಬುಲಾ ಏಕದಿನ ಗೆದ್ದ ಬಳಿಕ ಕೊಂಚ ರಿಲ್ಯಾಕ್ಸ್ ಆಗಲು ಕೊಹ್ಲಿ ವಾಟರ್ ಪಾರ್ಕ್ ಒಂದರಲ್ಲಿ ಮಜಾ ಮಾಡುತ್ತಿರುವ ಫೋಟೋ ವೈರಲ್ ಆಗಿದೆ. ಜಲಕ್ರೀಡೆಯಾಡುತ್ತಿರುವ ಆನೆಗಳೊಂದಿಗೆ ತೆಗೆಸಿಕೊಂಡ ಫೋಟೋವನ್ನು ಕೊಹ್ಲಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ.

ಟೆಸ್ಟ್ ಸರಣಿ ಸಂದರ್ಭದಲ್ಲಿ ಕೊಹ್ಲಿ ಮತ್ತು ಕೆಎಲ್ ರಾಹುಲ್ ಸ್ವಿಮ್ಮಿಂಗ್ ಪೂಲ್ ಒಂದರಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಫೋಟೋ ವೈರಲ್ ಆಗಿತ್ತು. ಅಂತೂ ಇತ್ತೀಚೆಗೆ ಟೀಂ ಇಂಡಿಯಾ ಆಟಗಾರರು ಪ್ರತೀ ಪಂದ್ಯ ಮುಗಿದ ಮೇಲೆ ಮಸ್ತ್ ಮಜಾ ಮಾಡುತ್ತಿರುವುದು ಸುಳ್ಳಲ್ಲ. ದ್ವಿತೀಯ ಏಕದಿನ ಪಂದ್ಯ ಗುರುವಾರ ಪಲ್ಲಿಕೆಲೆಯಲ್ಲಿ ನಡೆಯಲಿದೆ.

ಇದನ್ನೂ ಓದಿ.. ಬೆರಳು ಹೇಳುವುದು ಭವಿಷ್ಯ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ರಾಜಸ್ತಾನ್ ರಾಯಲ್ಸ್ ತಂಡದಿಂದ ಬಂದ ಮಹತ್ವದ ಸುದ್ದಿ!