Publish Date: Mon, 21 Aug 2017 (08:52 IST)
Updated Date: Mon, 21 Aug 2017 (08:56 IST)
ಕೊಲೊಂಬೊ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ ಏಕದಿನ ಸರಣಿಗೆ ಮೊದಲು ತಂಡವನ್ನು ಸಜ್ಜುಗೊಳಿಸುವುದು ಬಿಟ್ಟು ಪ್ರೇಯಸಿ ಅನುಷ್ಕಾ ಜತೆ ಮಾಡಿದ ಕೆಲಸ ವೈರಲ್ ಆಗಿದೆ.
ಸದ್ಯಕ್ಕೆ ಕೊಹ್ಲಿ ಜತೆ ಲಂಕಾ ಪ್ರವಾಸದಲ್ಲಿರುವ ಅನುಷ್ಕಾ ಕೊಹ್ಲಿ ಜತೆ ಸೇರಿಕೊಂಡು ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಇತ್ತೀಚೆಗೆ ರವಿಶಾಸ್ತ್ರಿ ಜತೆ ಈ ಜೋಡಿ ಲಂಕಾ ಅಭಿಮಾನಿಗಳೊಂದಿಗೆ ತೆಗೆಸಿಕೊಂಡಿದ್ದ ಫೋಟೋ ಭಾರೀ ಜನಪ್ರಿಯವಾಗಿತ್ತು. ಇದೀಗ ಮತ್ತೆ ಕೊಹ್ಲಿ ಅನುಷ್ಕಾ ಜತೆ ಗಿಡ ನೆಡುತ್ತಿರುವ ಫೋಟೋ ವೈರಲ್ ಆಗಿದೆ. ಆದರೆ ಈ ಕಾರ್ಯಕ್ರಮ ನಡೆದಿದ್ದು ಯಾವಾಗ, ಎಲ್ಲಿ ಎನ್ನುವುದು ಮಾತ್ರ ಬಹಿರಂಗವಾಗಿಲ್ಲ.