Publish Date: Thu, 24 Aug 2017 (08:50 IST)
Updated Date: Thu, 24 Aug 2017 (08:53 IST)
ನವದೆಹಲಿ: ಕ್ರಿಕೆಟಿಗ ಗೌತಮ್ ಗಂಭೀರ್ ನಿರ್ಭೀತಿಯಿಂದ ತಮಗೆ ಅನಿಸಿದ್ದನ್ನು ಹೇಳುವ ಜಾಯಮಾನದವರು. ಇದೀಗ ಧೋನಿ ವಿಚಾರದಲ್ಲೂ ಕಡ್ಡಿ ಮುರಿದ ಹಾಗೆ ಮಾತನಾಡಿದ್ದಾರೆ.
ಹಳೇದೆಲ್ಲಾ ಹಳೆಯದು. ಹಳೇ ರೆಕಾರ್ಡ್ ಭವಿಷ್ಯಕ್ಕೆ ಉಪಯೋಗ ಬರಲ್ಲ. ಇನ್ನೂ ಮುಂದೆ ಧೋನಿ ತಮಗಿಷ್ಟ ಬಂದ ಸಮಯದವರೆಗೆ ಆಡಲಾಗದು ಎಂದು ಗಂಭೀರ್ ಹೇಳಿಕೆ ಕೊಟ್ಟಿದ್ದಾರೆ. ಅವರ ಈ ಹೇಳಿಕೆ ಮತ್ತಷ್ಟು ಚರ್ಚೆಗೆ ಗ್ರಾಸವಾಗಲಿದೆ.
“ಆಯ್ಕೆ ಮಾನದಂಡ ಎಲ್ಲರಿಗೂ ಒಂದೇ ರೀತಿ ಇರಬೇಕು. ಒಂದು ವೇಳೆ ಅವರು ಮುಂದಿನ ವಿಶ್ವಕಪ್ ನಲ್ಲಿ ಆಡಬೇಕೆಂದು ಬಯಸಿದರೆ, ಉತ್ತಮ ಪ್ರದರ್ಶನ ತೋರುತ್ತಲೇ ಇರಬೇಕು’ ಎಂದು ಟೀಂ ಇಂಡಿಯಾದಲ್ಲಿ ಸದ್ಯಕ್ಕೆ ಕಡೆಗಣಿಸಲ್ಪಟ್ಟಿರುವ ಹಿರಿಯ ಆಟಗಾರ ಅಭಿಪ್ರಾಯಪಟ್ಟಿದ್ದಾರೆ.