Publish Date: Tue, 29 Mar 2022 (16:07 IST)
Updated Date: Tue, 29 Mar 2022 (16:10 IST)
ಟಾಟಾ ಐಪಿಎಲ್-2022 ಟೂರ್ನಿಯ 15ನೇ ಆವೃತ್ತಿಯ ಪಂದ್ಯದಲ್ಲಿ ಬಲಿಷ್ಠ ಸನ್ ರೈಸರ್ಸ್ ಹೈದ್ರಾಬಾದ್ ಹಾಗೂ ರಾಜಾಸ್ಥಾನ್ ರಾಯಲ್ಸ್ ತಂಡಗಳಿಂದು ಸೆಣಸಲಿವೆ.ಪುಣೆಯ ಮಹಾರಾಷ್ಟ್ರದ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದ್ದು, ಉಭಯ ತಂಡಗಳು ಉತ್ತಮ ಪ್ರದರ್ಶನ ನೀಡಿ ಶುಭಾರಂಭ ಮಾಡುವ ಮೂಲಕ ಗೆಲುವಿನ ಅಭಿಯಾನಕ್ಕೆ ಸಜ್ಜಾಗಿವೆ. ಇವೆರಡೂ ತಂಡಗಳು ಈ ಹಿಂದೆ ಐಪಿಎಲ್ ಚಾಂಪಿಯನ್ ಪಟ್ಟ ಧರಿಸಿವೆ ಎಂಬುದು ವಿಶೇಷ.ಈವರೆಗೆ ಉಭಯ ತಂಡಗಳು ಒಟ್ಟು 15 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಅದರಲ್ಲಿ ಹೈದ್ರಾಬಾದ್ ತಂಡವು 8 ಪಂದ್ಯಗಳಲ್ಲಿ ಹಾಗೂ ರಾಜಾಸ್ಥಾನ್ ರಾಯಲ್ಸ್ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ