Publish Date: Tue, 29 Mar 2022 (08:50 IST)
Updated Date: Tue, 29 Mar 2022 (09:18 IST)
ಮುಂಬೈ: ಐಪಿಎಲ್ 2022 ರಲ್ಲಿ ಗೆಳೆಯ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ವಿರುದ್ಧ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೋಲು ಅನುಭವಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಆರಂಭಿಕ ಆಘಾತ ಎದುರಿಸಿತ್ತು. 29 ರನ್ ಗೇ 4 ವಿಕೆಟ್ ಕಳೆದುಕೊಂಡು ಹಳಿ ತಪ್ಪಿತ್ತು. ಈ ವೇಳೆ ದೀಪಕ್ ಹೂಡಾ (55), ಆಯುಷ್ ಬದೋನಿ (54) ತಂಡಕ್ಕೆ ಗೌರವಯುತ ಮೊತ್ತ ಕಲೆ ಹಾಕಲು ನೆರವಾದರು. ಅಂತಿಮವಾಗಿ ಲಕ್ನೋ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು.
ಈ ಮೊತ್ತ ಬೆನ್ನತ್ತಿದ ಗುಜರಾತ್ ಕೂಡಾ ಆರಂಭದಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಆದರೆ ಮ್ಯಾಥ್ಯೂ ವೇಡ್ 30, ನಾಯಕ ಹಾರ್ದಿಕ್ ಪಾಂಡ್ಯ 33, ಡೇವಿಡ್ ಮಿಲ್ಲರ್ 30 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಬಳಿಕ ರಾಹುಲ್ ತವಾತಿಯಾ ಅಜೇಯ 40 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಅಂತಿಮವಾಗಿ 19.4 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 161 ರನ್ ಗಳಿಸುವ ಮೂಲಕ ಗುಜರಾತ್ ಗೆಲುವು ಕಂಡಿತು.