Publish Date: Mon, 28 Mar 2022 (09:40 IST)
Updated Date: Mon, 28 Mar 2022 (09:45 IST)
ಮುಂಬೈ: ಈ ಐಪಿಎಲ್ ನಲ್ಲಿ ಧೋನಿ ನಾಯಕತ್ವ ತ್ಯಜಿಸಿ ಕೇವಲ ಸಿಎಸ್ ಕೆ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದಾರೆ. ಹಾಗಿದ್ದರೂ ತಾವು ಸೂಪರ್ ಕ್ಯಾಪ್ಟನ್ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.
ಅಸಲಿಗೆ ರವೀಂದ್ರ ಜಡೇಜಾ ಚೆನ್ನೈ ನಾಯಕರಾದರೂ ಧೋನಿಯೇ ತಂಡದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಕೆಕೆಆರ್ ವಿರುದ್ಧದ ಪಂದ್ಯದಲ್ಲೂ ಧೋನಿ ತಾವೇ ನಾಯಕರಂತೆ ಫೀಲ್ಡರ್ ಗಳನ್ನು ಸೆಟ್ ಮಾಡುತ್ತಿದ್ದುದು ಕಂಡುಬಂದಿದೆ. ರವೀಂದ್ರ ಜಡೇಜಾ ಈ ಬಾರಿ ಧೋನಿ ಅಡಿಯಲ್ಲಿ ನಾಯಕರಾಗಿ ಅನುಭವ ಪಡೆಯಲಿದ್ದಾರೆ. ಮುಂದಿನ ಆವೃತ್ತಿಯಿಂದ ಅವರೇ ಏಕಾಂಗಿಯಾಗಿ ತಂಡ ಮುನ್ನಡೆಸಬೇಕಾಗಬಹುದು.