Publish Date: Sun, 27 Mar 2022 (21:17 IST)
Updated Date: Sun, 27 Mar 2022 (21:19 IST)
ಮುಂಬೈ: ಐಪಿಎಲ್ 2022 ರ ಮೊದಲ ಪಂದ್ಯವಾಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಿಂಗ್ಸ್ ಪಂಜಾಬ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿ 2 ವಿಕೆಟ್ ನಷ್ಟಕ್ಕೆ 205 ರನ್ ಗಳ ಭರ್ಜರಿ ಮೊತ್ತ ಕಲೆ ಹಾಕಿದೆ.
ಆರಂಭಿಕರಾಗಿ ಕಣಕ್ಕಿಳಿದ ನಾಯಕ ಫಾ ಡು ಪ್ಲೆಸಿಸ್ ಹೊಡೆಬಡಿಯ ಆಟದ ಮೂಲಕ 88 ರನ್ ಗಳಿಸಿ ಔಟಾದರು. ಕಿಂಗ್ ಕೊಹ್ಲಿ 29 ಎಸೆತಗಳಲ್ಲಿ 41 ರನ್ ಗಳಿಸಿ ಮಿಂಚಿದರು.
ಆದರೆ ಕೊನೆಯಲ್ಲಿ ಬಂದು ಅಬ್ಬರಿಸಿದ ದಿನೇಶ್ ಕಾರ್ತಿಕ್ ಕೇವಲ 14 ಎಸೆತಗಳಲ್ಲಿ 32 ರನ್ ಗಳಿಸುವ ಮೂಲಕ ತಂಡದ ಮೊತ್ತ 200 ರ ಗಡಿ ದಾಟುವಂತೆ ಮಾಡಿದರು. ಪಂಜಾಬ್ ಪರ ಅರ್ಶದೀಪ್ ಮತ್ತು ರಾಹುಲ್ ಚಹರ್ ತಲಾ 1 ವಿಕೆಟ್ ಕಬಳಿಸಿದರು.