Publish Date: Sun, 27 Mar 2022 (17:18 IST)
Updated Date: Sun, 27 Mar 2022 (17:19 IST)
ಮುಂಬೈ: ಇಶಾನ್ ಕಿಶನ್ ಅವರ ಅಬ್ಬರದ ಬ್ಯಾಟಿಂಗ್ ನಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿದೆ.
ಮುಂಬೈ ಆರಂಭ ಉತ್ತಮವಾಗಿತ್ತು. ಇಶಾನ್ ಜೊತೆಗೆ ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ಬಿರುಸಿನ 41 ರನ್ ಗಳಿಸಿ ಔಟಾದರು. ಆದರೆ ಕೊನೆಯವರೆಗೂ ಔಟಾಗದೇ ಉಳಿದ ಇಶಾನ್ ಕಿಶನ್ 48 ಎಸೆತಗಳಿಂದ 81 ರನ್ ಚಚ್ಚಿ ತಂಡಕ್ಕೆ ಉತ್ತಮ ಮೊತ್ತ ನೀಡಲು ಕಾರಣವಾದರು. ಉಳಿದಂತೆ ತಿಲಕ್ ವರ್ಮ 22 ರನ್ ಗಳಿಸಿದರು. ಡೆಲ್ಲಿ ಪರ ಕುಲದೀಪ್ ಯಾದವ್ 3, ಖಲೀಲ್ ಅಹಮ್ಮದ್ 2 ವಿಕೆಟ್ ಕಬಳಿಸಿದರು.