ಮುಂಬೈ: ಐಪಿಎಲ್ ನ ಇಂದಿನ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಲಿವೆ.
ಈ ಕೂಟದಲ್ಲಿ ಎರಡೂ ತಂಡಕ್ಕೆ ಇದು ಮೊದಲ ಪಂದ್ಯ. ಎರಡೂ ತಂಡಗಳೂ ಹಳೆಯ ನಾಯಕನೊಂದಿಗೇ ಕಣಕ್ಕಿಳಿಯುತ್ತಿವೆ. ಸಂಜು ಸ್ಯಾಮ್ಸನ್ ನೇತೃತ್ವದಲ್ಲಿ ಕಳೆದ ಸೀಸನ್ ನಲ್ಲಿ ರಾಜಸ್ಥಾನ್ ಆರಂಭದಲ್ಲಿ ಭರವಸೆ ಮೂಡಿಸಿದರೂ ಅಂತಿಮ ಹಂತದಲ್ಲಿ ಎಡವಿತ್ತು.
ಇನ್ನು, ಕೇನ್ ವಿಲಿಯಮ್ಸನ್ ಪಡೆಗೆ ಯುವ, ಪ್ರತಿಭಾವಂತ ಕ್ರಿಕೆಟಿಗರ ಬಲವಿದೆ. ಈ ಬಾರಿಯಾದರೂ ನಿರ್ಣಾಯಕ ಘಟ್ಟಕ್ಕೆ ತಲುಪುವ ನಿರೀಕ್ಷೆಯಲ್ಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.