Select Your Language

Notifications

webdunia
webdunia
webdunia
webdunia

ಕಲಬುರಗಿ ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿದ ಶ್ರೀರಾಮುಲು

ಕಲಬುರಗಿ ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿದ  ಶ್ರೀರಾಮುಲು
ಕಲಬುರಗಿ , ಸೋಮವಾರ, 28 ಜನವರಿ 2019 (19:39 IST)
ಇಡೀ ಕಲಬುರಗಿಯಲ್ಲಿ ಬಿಜೆಪಿ ತಂಡಗಳು ಬರ ಅಧ್ಯಯನ ನಡೆಸುತ್ತಿವೆ. ಸೇಡಂ, ಚಿತ್ತಾಪುರ ತಾಲೂಕಿನಲ್ಲಿ ಇಂದು ಬರ ಅಧ್ಯಯನ ನಡೆಸಿದೆವು. ಒಂದೆಕೆರೆ ಪ್ರದೇಶದಲ್ಲಿ ಐದಾರು ಚೀಲ ಬರಬೇಕಿದ್ದ ತೊಗರಿ ಅರ್ಧ ಚೀಲ ಸಹ ಬಂದಿಲ್ಲ. ಕಲಬುರಗಿ ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿದ ಬಳಿಕ ಶ್ರೀರಾಮುಲು ಸುದ್ದಿಗೋಷ್ಠಿ ಯಲ್ಲಿ ಈ ಮಾಹಿತಿ ನೀಡಿದರು.  

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಬೇಜವಾಬ್ದಾರಿತನ ತೋರುತ್ತಿದ್ದಾರೆ. ಸಾಕಷ್ಟು ಜನ ಗೂಳೆ ಹೋಗುತ್ತಿದ್ದು ಅವರನ್ನೂ ತಡೆಯಲು ಆಗುತ್ತಿಲ್ಲ. ಸರ್ಕಾರದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ ಎಂದ ಶ್ರೀರಾಮುಲು,

ಇಂದು ರೈತರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಬರ ಪರಿಹಾರ ಕಾಮಗಾರಿಗೆ ಸರ್ಕಾರ ಮನಸು ಮಾಡ್ತಿಲ್ಲ ಅನಿಸುತ್ತಿದೆ. ನಾವು ನಡೆಸಿದ ಬರ ಅಧ್ಯಯನ ದ ವರದಿಯನ್ನು ವಿಪಕ್ಷವಾಗಿ ನಾವು ಸಿಎಂ ಹೆಚ್‌ಡಿಕೆಗೆ ಸಲ್ಲಿಹಿಸುತ್ತೇವೆ.

ಈವರೆಗೂ ಬರ ಪರಿಹಾರ ಕಾಮಗಾರಿಗೆ ಒಂದು ತಾಲೂಕಿಗೂ ಹಣ ಬಿಡುಗಡೆ ಆಗಿಲ್ಲ. ಸದನದಲ್ಲಿ ಈ ಕುರಿತು ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದರು.



Share this Story:

Follow Webdunia kannada

ಮುಂದಿನ ಸುದ್ದಿ

14ನೇ ಹಣಕಾಸು ಅನುದಾನ ಲಪಟಾಯಿಸಿದ ಗ್ರಾಮ ಪಂಚಾಯತ ಪಿಡಿಒ