Publish Date: Mon, 28 Jan 2019 (19:28 IST)
Updated Date: Mon, 28 Jan 2019 (19:31 IST)
14ನೇ ಹಣಕಾಸು ಅನುದಾನ ದಲ್ಲಿ ಬಾರಿ ಗೋಲ ಮಾಲ್ ನಡೆದಿರುವುದು ಬಯಲಾಗಿದೆ.
16 ಲಕ್ಷ ರೂಪಾಯಿ ಲಪಟಾಯಿಸಿದ ಗ್ರಾಮ ಪಂಚಾಯತ ಪಿಡಿಒ ಸುರೇಖಾ-ಅಧ್ಯಕ್ಷ ಪಾರೊಕ ಜಮಾದರ್ ಅಕ್ರಮ ಎಸಗಿದ್ದಾರೆ.
ಅಕ್ರಮ ನಡೆದ ಹಿನ್ನಲೆ ಮನ್ನಾಖೇಳಿ ಗ್ರಾಮ ಪಂಚಾಯತ ಪಿಡಿಒ ಅಮಾನತು ಮಾಡಲಾಗಿದೆ.
ಬೀದರ್ ಜಿಲ್ಲೆ ಮನ್ನಾಖೆಳಿ ಗ್ರಾಮ ಪಂಚಾಯತ್ ನಲ್ಲಿ ನಡೀತಿದ್ಯಾ ಹಗಲು ದರೋಡೆ ಎಂಬ ಅನುಮಾನ ಜನರಲ್ಲಿ ಮೂಡಿದೆ.
ಗ್ರಾಂ ಪಂ ಪಂಚಾಯತ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯತ ಅಧ್ಯಕ್ಷ ರಿಂದ ಹಗಲು ದರೋಡೆ ನಡೆದಿದೆ.
ವಿವಿಧ ವಸತಿ ಯೋಜನೆಯಲ್ಲಿ ಮನೆಗಳು ಮಂಜೂರು ಮಾಡಿ ಹಣ ಗುಳುಂ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮನೆಗಳ ನಿರ್ಮಿಸಿದೆ ಹಳೆ ಮನೆಗಳಿಗೆ ಜಿಪಿಎಸ್ ಮಾಡಿ ಹಣವನ್ನು ಲಪಟಾಯಿರುವ ಪಿಡಿಓ-ಅಧ್ಯಕ್ಷ ರ ಕ್ರಮಕ್ಕೆ ಜನರು ಒತ್ತಾಯ ಮಾಡಿದ್ದಾರೆ.