Select Your Language

Notifications

webdunia
webdunia
webdunia
webdunia

ಅರ್ಚಕನಿಂದ ಹಣ ವಸೂಲಿ!

ದೇವಾಲಯ
ಗುಂಡ್ಲುಪೇಟೆ , ಶನಿವಾರ, 26 ಜನವರಿ 2019 (15:03 IST)
ದೇವರ ಹೆಸರಿನಲ್ಲಿ ಅರ್ಚಕ ಮಾಡಬಾರದ ಕೆಲಸ ಮಾಡಿ ಸಿಕ್ಕಿ ಬಿದ್ದಿದ್ದಾನೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಹುಲುಗನ ಮರಡಿ ದೇವಸ್ಥಾನದಲ್ಲಿ ದೇವರ ಹೆಸರಿನಲ್ಲಿ ಅರ್ಚಕರಿಂದ ಹಣ ವಸೂಲಿ ದಂಧೆ ನಡೆದಿದೆ. ದೇವಸ್ಥಾನದಲ್ಲಿ ನಡೆಯುತ್ತಿದ್ದ ಗರುಡೋತ್ಸವದ ಸಂದರ್ಭದಲ್ಲಿ ಯಾವುದೇ ರೀತಿಯ ರಶೀದಿ ನೀಡದೇ ವೆಂಕಟರಮಣಸ್ವಾಮಿ ಭಕ್ತರಿಂದ ಹಣ ವಸೂಲಿ ಮಾಡುತ್ತಿದ್ದರು.

ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನದಲ್ಲಿ ಅರ್ಚಕರಿಂದ ಎಗ್ಗಿಲ್ಲದೇ ಹಣ ವಸೂಲಿ ಮಾಡಲಾಗುತ್ತಿದೆ. ಪ್ರತಿನಿತ್ಯ ದೇವಸ್ಥಾನದಲ್ಲಿ ನಡೆಯುವ ಯಾವುದೇ ಕಾರ್ಯಕ್ಕೂ ರಶೀದಿ ನೀಡದೇ ಸಾರ್ವಜನಿಕ ರಿಗೆ ಅರ್ಚಕ ವಂಚಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗೊತ್ತಿದ್ದರೂ ತಾಲ್ಲೂಕು ಆಡಳಿತ ಸೂಕ್ತ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಜನರು ದೂರಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಗಳಿಗೆ ಭಾರತ ರತ್ನ ಕೊಟ್ಟರೆ ಅದರ ಗೌರವ ಹೆಚ್ಚುತ್ತದೆ- ಸಿದ್ದರಾಮಯ್ಯ