Select Your Language

Notifications

webdunia
webdunia
webdunia
webdunia

ಅಯ್ಯಪ್ಪ ದೇವಾಲಯವನ್ನು ಪ್ರವೇಶಿಸಿದ ಕನಕದುರ್ಗಗೆ ಕುಟುಂಬದವರು ನೀಡಿದ ಶಿಕ್ಷೆ ಏನು ಗೊತ್ತಾ?

ಅಯ್ಯಪ್ಪ ದೇವಾಲಯವನ್ನು ಪ್ರವೇಶಿಸಿದ ಕನಕದುರ್ಗಗೆ ಕುಟುಂಬದವರು ನೀಡಿದ ಶಿಕ್ಷೆ ಏನು ಗೊತ್ತಾ?
ತಿರುವನಂತಪುರಂ , ಬುಧವಾರ, 23 ಜನವರಿ 2019 (11:49 IST)
ತಿರುವನಂತಪುರಂ : ಶಬರಿಮಲೆ ಅಯ್ಯಪ್ಪ ದೇವಾಲಯವನ್ನು ಪ್ರವೇಶಿಸಿದ್ದ ಕನಕದುರ್ಗ ಅವರನ್ನು ಕುಟುಂಬ ಸದಸ್ಯರು ಮನೆಯಿಂದಲೇ ಈಗ ಹೊರಹಾಕಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.


ಮಹಿಳೆಯರಾದ ಬಿಂದು ಮತ್ತು ಕನಕದುರ್ಗ ಜನವರಿ 2 ರಂದು ಶಬರಿಮಲೆ ದೇವಾಲಯವನ್ನು ಪ್ರವೇಶಿಸಿದ್ದರು. ದೇವಾಲಯದ ಸಂಪ್ರದಾಯವನ್ನು ಮುರಿದ ಇಬ್ಬರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಡಿಸೆಂಬರ್ 22 ರಂದು ತಿರುವನಂತಪುರಂನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳುತ್ತೇನೆ ಎಂದು ಮನೆಯವರಿಗೆ ಸುಳ್ಳು ಹೇಳಿ ಹೋದ ಕನಕದುರ್ಗ ಭಕ್ತರ ವಿರೋಧದ ಮಧ್ಯೆ ದೇವಾಲಯವನ್ನು ಪ್ರವೇಶಿಸಿದ್ದಕ್ಕೆ ಕೋಪಗೊಂಡಿರುವ ಅತ್ತೆ ಆಕೆಗೆ ಕಟ್ಟಿಗೆಯಿಂದ ಹೊಡೆದು ಹಲ್ಲೆ ಮಾಡಿ ಮನೆಯಿಂದ ಹೊರಹಾಕಿದ್ದಾರೆ.


ಅಯ್ಯಪ್ಪ ದೇವಾಲಯದ ಸಂಪ್ರದಾಯವನ್ನು ಮುರಿದಿದ್ದಕ್ಕೆ ಕನಕದುರ್ಗ ಸಾರ್ವಜನಿಕವಾಗಿ ಹಿಂದೂ ಸಮುದಾಯದ ಕ್ಷಮೆ ಕೇಳದ ಹೊರತು ಆಕೆಯನ್ನು ಮನೆಗೆ ಸೇರಿಸಿಕೊಳ್ಳುವುದಿಲ್ಲ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಆದಕಾರಣ ಇದೀಗ ಈಗ ಕನಕದುರ್ಗ ಸರ್ಕಾರದ ವಸತಿ ನಿಲಯದಲ್ಲಿ ಆಶ್ರಯ ಪಡೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಗಳ ಕಾರ್ಯದಲ್ಲಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ ಖಾಕಿ ಪಡೆಗೆ ಸರ್ಕಾರದಿಂದ ಭರ್ಜರಿ ಉಡುಗೊರೆ