Publish Date: Sun, 27 Jan 2019 (15:23 IST)
Updated Date: Sun, 27 Jan 2019 (15:25 IST)
ಬೆಂಗಳೂರಿನ ವಸಂತಪುರ ವಾರ್ಡ್ನ ಬಿಕಾಸಿಪುರ ಗ್ರಾಮದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ಬಡಾವಣೆಗೆ ರೆಬೆಲ್ ಸ್ಟಾರ್ ಅಂಬರೀಶ್ ಬಡಾವಣೆ ಎಂದು ಬಿಬಿಎಂಪಿ ಸರ್ವಾನುಮತದಿಂದ ನಾಮಕರಣ ಮಾಡಿದೆ.
ಬಿಕಾಸಿಪುರ ಗ್ರಾಮದಲ್ಲಿನ ಬಿಡಿಎ ಬಡಾವಣೆಗೆ ಯಾವುದೇ ಹೆಸರು ಇಲ್ಲದಿರುವುದರಿಂದ ರೆಬೆಲ್ ಸ್ಟಾರ್ ಅಂಬರೀಶ್ ಬಡಾವಣೆ ಎಂದು ನಾಮಕರಣ ಮಾಡಲಾಗಿದೆ ಎಂದು ಪಾಲಿಕೆ ಸದಸ್ಯೆ ಶೋಭಾಗೌಡ ತಿಳಿಸಿದ್ದಾರೆ.
ರೆಬೆಲ್ ಸ್ಟಾರ್ ಅಂಬರೀಶ್ ಅವರ ಗೌರವಾರ್ಥ ಅವರ ಹೆಸರನ್ನು ನಾಮಕರಣ ಮಾಡಲು ಪಾಲಿಕೆ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ವರ್ಷದ ಡಿ. 27 ರಂದು ನಡೆದ ಮಾಸಿಕ ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಎಮ್. ಶಿವರಾಜ್ ಅವರು ನಿರ್ಣಯವನ್ನು ಮಂಡಿಸಿದ್ದರು. ಇದಕ್ಕೆ ಕಾಂಗ್ರೆಸ್ನ ಆರ್.ಎಸ್ ಸತ್ಯನಾರಾಯಣ ಅವರು ನಿರ್ಣಯವನ್ನು ಅನುಮೋದಿಸಿದ್ದರು. ನಂತರ ನಿರ್ಣಯವನ್ನು ಮತಕ್ಕೆ ಹಾಕಿ ಸರ್ವಾನುಮತದಿಂದ ಅಂಗೀಕರಿಸಲಾಯಿತು ಎಂದು ಅವರು ತಿಳಿಸಿದ್ದಾರೆ.