ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ದಂಪತಿ ಸಮೇತ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
ಸುಪ್ರಭಾತ ಪೂಜೆಯಲ್ಲಿ ಭಾಗಿಯಾಗಿದ್ದಾರೆ ಮಾಜಿ ಪ್ರಧಾನಿ.
									
										
								
																	ದೇವೇಗೌಡರು ಪತ್ನಿ ಚೆನ್ನಮ್ಮರಿಂದ ಶಾರದಾಂಭೆಗೆ ಪೂಜೆ ಸಲ್ಲಿಕೆ ಮಾಡಲಾಗಿದೆ. ಪೂಜೆ ಬಳಿಕ ಜಗದ್ಗುರುಗಳನ್ನ ಭೇಟಿ ಮಾಡಿದ್ರು.
									
			
			 
 			
 
 			
					
			        							
								
																	ಪ್ರಕೃತಿ ಚಿಕಿತ್ಸೆ ಮುಗಿಸಿ ಶೃಂಗೇರಿಗೆ ಆಗಮಿಸಿದ್ದರು ದೇವೇಗೌಡ ದಂಪತಿ. ರಾತ್ರಿ ಶೃಂಗೇರಿ ದೇವಾಲಯದಲ್ಲೇ ವಾಸ್ತವ್ಯ ಹೂಡಿದ್ದರು ಮಾಜಿ ಪ್ರಧಾನಿ.
									
										
								
																	ಭಾರತೀ ತೀರ್ಥ ಹಾಗೂ ವಿಧುಶೇಖರ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ ದೇವೇಗೌಡ ದಂಪತಿ. ಶೃಂಗೇರಿಯಿಂದ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ ದೇವೇಗೌಡ-ಚೆನ್ನಮ್ಮ.