Publish Date: Mon, 14 Oct 2019 (17:44 IST)
Updated Date: Mon, 14 Oct 2019 (17:47 IST)
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಮುಖ್ಯಮಂತ್ರಿಯೊಬ್ಬರು ಸತ್ತ ಇಲಿ ಜೊತೆಗೆ ಹೋಲಿಕೆ ಮಾಡಿದ್ದಾರೆ.
ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಚುನಾವಣೆ ರ್ಯಾಲಿಯೊಂದರಲ್ಲಿ ಮಾತನಾಡುವಾಗ ಈ ರೀತಿ ಮಾತನಾಡಿರೋದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಈಗ ಹೊಸ ಅಧ್ಯಕ್ಷರನ್ನು ಹುಡುಕುತ್ತಿದೆ. ಸೋನಿಯಾ ಗಾಂಧಿಯನ್ನು ಮುಖ್ಯಸ್ಥೆಯನ್ನಾಗಿ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷರನ್ನಾಗಿ ಸೋನಿಯಾ ಗಾಂಧಿಯವರನ್ನ ನೇಮಕ ಮಾಡಿರೋದು ಸತ್ತ ಇಲಿಗೆ ಮಾಡಿದಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರೋ ಹರ್ಯಾಣ ಕಾಂಗ್ರೆಸ್, ಸಿಎಂ ಕ್ಷಮೆ ಕೇಳಬೇಕೆಂದು ಆಗ್ರಹ ಮಾಡಿದೆ. ಸಿಎಂ ಖಟ್ಟರ್ ಅಲ್ಲ ಖಚ್ಛರ್ ಅಂತ ತಿರುಗೇಟು ನೀಡಿದೆ.