Select Your Language

Notifications

webdunia
webdunia
webdunia
webdunia

ವಿಪಕ್ಷ ನಾಯಕನ ಪಟ್ಟಕ್ಕೇರಲು ಕಾಂಗ್ರೆಸ್ ನಲ್ಲಿ ಎರಡು ಬಣಗಳ ನಡುವೆ ಭಾರೀ ಪೈಪೋಟಿ

ವಿಪಕ್ಷ ನಾಯಕನ ಪಟ್ಟಕ್ಕೇರಲು ಕಾಂಗ್ರೆಸ್ ನಲ್ಲಿ ಎರಡು ಬಣಗಳ ನಡುವೆ ಭಾರೀ ಪೈಪೋಟಿ
ಬೆಂಗಳೂರು , ಭಾನುವಾರ, 6 ಅಕ್ಟೋಬರ್ 2019 (10:49 IST)
ಬೆಂಗಳೂರು : ಕಾಂಗ್ರೆಸ್ ನಲ್ಲಿ ವಿಪಕ್ಷ ನಾಯಕನ ಪಟ್ಟಕ್ಕೇರಲು ಸಿದ್ದರಾಮಯ್ಯ ಬಣ ಹಾಗೂ ಮೂಲ ಕಾಂಗ್ರೆಸ್ಸಿಗರ ಬಣದ  ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ.



ಎರಡು ಬಣಕ್ಕೂ ಪ್ರತಿಷ್ಠೆಯಾದ ವಿಪಕ್ಷ ನಾಯಕನ ಸ್ಥಾನದ ಮೇಲೆ ಎರಡು ಬಣಗಳು ಕಣ್ಣಿಟ್ಟಿದ್ದು, ಸಿದ್ದರಾಮಯ್ಯ ರನ್ನ ಸೈಡ್ ಲೈನ್ ಮಾಡಲು ಮೂಲ ಕಾಂಗ್ರೆಸ್ಸಿಗರ ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ  ಸಿದ್ದರಾಮಯ್ಯ  ಬಣಕ್ಕೆ ಬೆಂಬಲವಾಗಿ ನಿಲ್ಲುತ್ತಿದ್ದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅಧ್ಯಕ್ಷರಾಗುತ್ತಿದ್ದಂತೆ ಮೂಲ ಕಾಂಗ್ರೆಸ್ಸಿಗರಿಗೆ ಹೆಚ್ಚು ಮಣೆ ಹಾಕುತ್ತಿದ್ದಾರೆ ಎನ್ನಲಾಗಿದೆ.

 

ಹಾಗೇ ವೀಕ್ಷಕರಾಗಿ ಕೆ.ಸಿ.ವೇಣುಗೋಪಾಲ್ ಬದಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ರಾಜ್ಯಕ್ಕೆ ಭೇಟಿ ನೀಡಿದ್ದು, ಇಂದು  ಮಧುಸೂದನ್ ಮಿಸ್ತ್ರಿ ನೇತೃತ್ವದಲ್ಲಿ ವಿಪಕ್ಷ ನಾಯಕನ ಆಯ್ಕೆ ಸಭೆ ನಡೆಯಲಿದೆ. ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ ವಿಪಕ್ಷ ನಾಯಕನ ಆಯ್ಕೆ.  


Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರು ದಸರಾ ಜಂಬೂ ಸವಾರಿ ವೇಳೆ ಉಗ್ರರ ದಾಳಿ ಶಂಕೆ; ಈ ಬಗ್ಗೆ ಸಚಿವ ವಿ. ಸೋಮಣ್ಣ ಹೇಳಿದ್ದೇನು?