ಡಿಕೆಶಿ ಕುಟುಂಬಕ್ಕೆ ಸೋನಿಯಾ ಗಾಂಧಿ ಅಭಯ

ಮಂಗಳವಾರ, 10 ಸೆಪ್ಟಂಬರ್ 2019 (17:55 IST)
ರಾಜ್ಯದ ಮಾಜಿ ಸಚಿವ ಹಾಗೂ ಕೈ ಪಡೆಯ ನಾಯಕ ಡಿ.ಕೆ.ಶಿವಕುಮಾರ್ ರ ಸಹೋದರ, ಸಂಸದ ಡಿ.ಕೆ.ಸುರೇಶ್ ಗೆ ಸೋನಿಯಾ ಗಾಂಧಿ ಅಭಯ ನೀಡಿದ್ದಾರೆ.

ಇಡಿ ಬಂಧನಕ್ಕೆ ಒಳಗಾಗಿರೋ ಡಿ.ಕೆ.ಶಿವಕುಮಾರ್ ಕುಟುಂಬದ ಬೆನ್ನಿಗೆ ಕಾಂಗ್ರೆಸ್ ಇದೆ ಅಂತ ಸೋನಿಯಾ ಗಾಂಧಿ ಭರವಸೆ ನೀಡಿದ್ದಾರೆ.

 ಸೋನಿಯಾ ಗಾಂಧಿ ನಿವಾಸಕ್ಕೆ ಸಂಸದ ಡಿ.ಕೆ.ಸುರೇಶ್ ಭೇಟಿ ನೀಡಿದ್ರು. ಆಗ ಚರ್ಚೆ ನಡೆಸಿದ ಕೈ ಪಾಳೆಯದ ಅಧಿನಾಯಕಿ, ಡಿಕೆಶಿಗೆ ಧೈರ್ಯ ತುಂಬಿ ಅಂತ ಸುರೇಶ್ ಗೆ ಹೇಳಿದ್ರು.

ಕಾನೂನು, ರಾಜಕೀಯ ಹೋರಾಟದಲ್ಲಿ ಕಾಂಗ್ರೆಸ್ ಬೆಂಬಲವಾಗಿ ನಿಲ್ಲುತ್ತದೆ ಅಂತ ಸೋನಿಯಾ ಗಾಂಧಿ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಭಾರತಕ್ಕೆ ಓಡಿ ಬಂದ ಸಚಿವ : ಪಾಕಿಸ್ತಾನಕ್ಕೆ ಭಾರೀ ಮುಖಭಂಗ