ಇಂದಿನ ಸಿಎಲ್ ಪಿ ಸಭೆಗೆ ಪರಮೇಶ್ವರ್ ಗೈರು; ಸಿದ್ದರಾಮಯ್ಯ ಮೇಲೆ ಮುನಿಕೊಂಡ್ರಾ ಪರಮೇಶ್ವರ್ ?

ಬುಧವಾರ, 18 ಸೆಪ್ಟಂಬರ್ 2019 (12:02 IST)
ಬೆಂಗಳೂರು : ಇಂದು ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಸಿಎಲ್ ಪಿ ಸಭೆಗೆ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ಗೈರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಉಪಚುನಾವಣೆ ಸಭೆಗಳಿಂದ ಪರಮೇಶ್ವರ್ ನನ್ನ ದೂರ ಇಡಲಾಗಿತ್ತು. ಅಲ್ಲದೇ ಅವರಿಗೆ ಒಂದು ಕ್ಷೇತ್ರದ ವೀಕ್ಷಕರಾಗಿ ಮಾತ್ರ ಜವಬ್ದಾರಿ ನೀಡಲಾಗಿತ್ತು. ಈ ಎಲ್ಲಾ ಬೆಳವಣೆಗೆಗಳಿಂದ ಬೇಸತ್ತು ದೆಹಲಿಗೆ ತೆರಳಿದ ಪರಮೇಶ್ವರ್ ಅವರು  ನೇರವಾಗಿ ಸೋನಿಯಾ ಗಾಂಧಿಯನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ.


ಹಾಗೇ ಸಿದ್ದರಾಮಯ್ಯ ನಡೆಯ ಬಗ್ಗೆ ಅಸಮಾಧಾನಗೊಂಡಿದ್ದ ಅವರು, ಸಿದ್ದರಾಮಯ್ಯ ಗೆ ವಿಪಕ್ಷ ಸ್ಥಾನ ನೀಡುವ ಬಗ್ಗೆಯೂ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.  ಇಂದಿನ ಸಿಎಲ್ ಪಿ ಸಭೆಯ ಹಿಂದೆ ಸಿದ್ದರಾಯ್ಯ ರಾಜಕೀಯ ಲೆಕ್ಕಚಾರವಿದ್ದು, ಕೈನ ಪ್ರಶ್ನಾತೀತ ನಾಯಕನೆಂದು ಬಿಂಬಿಸಿಕೊಳ್ಳಲು ಪ್ಲ್ಯಾನ್ ಮಾಡಿದ್ದು, ಈ ವಿಚಾರಕ್ಕೆ ಸಿದ್ದರಾಮಯ್ಯ ಮೇಲೆ ಪರಮೇಶ್ವರ್ ತೀವ್ರವಾಗಿ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅನರ್ಹರು ಭಿಕ್ಷೆ ಬೇಡುತ್ತಿದ್ದಾರೆ ಎಂದ ದಿನೇಶ್ ಗುಂಡೂರಾವ್ ಗೆ ಬಿಸಿಮುಟ್ಟಿಸಿದ ಸುಧಾಕರ್