Select Your Language

Notifications

webdunia
webdunia
webdunia
webdunia

ಮಗನ ಸಾವಿಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ : ರೇಣುಕಾಚಾರ್ಯ

ಮಗನ ಸಾವಿಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ : ರೇಣುಕಾಚಾರ್ಯ
ದಾವಣಗೆರೆ , ಭಾನುವಾರ, 6 ನವೆಂಬರ್ 2022 (14:20 IST)
ದಾವಣಗೆರೆ : ಸಹೋದರನ ಪುತ್ರ ಚಂದ್ರಶೇಖರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಪೊಲೀಸರ ವಿರುದ್ಧವೇ ಅನುಮಾನ ವ್ಯಕ್ತಪಡಿಸಿದ್ದಾರೆ. 
 
ನರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗನ ಸಾವಿಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ. ನನ್ನ ಮಗನ ಶವದ ಮೇಲೆ ನೂರಾರು ಕಾರುಗಳನ್ನು ಹಾಕಿಕೊಂಡು ಓಡಾಡಿದರು. ಆದರೆ ನನ್ನ ಮಗನನ್ನು ಪತ್ತೆ ಮಾಡಿದ್ದು ನನ್ನ ಕ್ಷೇತ್ರದ ಜನರು.

ಡ್ರೋಣ್ ಮೂಲಕ ನನ್ನ ಮಗನನ್ನು ಹುಡುಕಾಟ ನಡೆಸಿದ್ದಾರೆ. ಆದರೆ ನಿನ್ನೆ ಒಬ್ಬ ಅಧಿಕಾರಿ ಬಂದು ಓವರ್ ಸ್ಪೀಡ್ ನಲ್ಲಿ ಬಂದು ಬಿದ್ದಿದ್ದಾನೆ ಎಂದು ಹೇಳುತ್ತಿದ್ದಾರೆ. ಹಾಗಾದ್ರೆ ಅವನ ಕೈಗೆ ಯಾರು ಹಗ್ಗ ಕಟ್ಟಿದ್ದರು ಹೇಳಿ.

ಪೊಲೀಸರ ನಿರ್ಲಕ್ಷ್ಯ ಇದರಲ್ಲಿ ಎದ್ದು ಕಾಣುತ್ತಿದೆ, ಕನಿಷ್ಠ ಪಕ್ಷ ಆ ಅಧಿಕಾರಿ ನನ್ನ ಬಳಿ ಮಾಹಿತಿ ಪಡೆಯಲು ಕೂಡ ಬಂದಿಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ ವಿರುದ್ಧ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಗೆ 1 ವರ್ಷ ಜೈಲು!