Select Your Language

Notifications

webdunia
webdunia
webdunia
webdunia

ಹೆತ್ತ ತಂದೆಯನ್ನೇ ಕೊಂದ ಮಗ

gadag news ಗದಗ್‌ ಸುದ್ದಿ ತಂದೆ ಮಗ
bengaluru , ಸೋಮವಾರ, 16 ಮೇ 2022 (14:25 IST)
ಮಗನೇ, ತಂದೆಯನ್ನು ಚೂರಿಯಿಂದ ಚುಚ್ಚಿ ಕೊಲೆಗೈಯ್ದ ಘಟನೆ ಗದಗ ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ನಡೆದಿದೆ.
55 ವರ್ಷದ ಭರಮಪ್ಪ ದೊಡ್ಡಮನೆ ಎನ್ನುವ ವ್ಯಕ್ತಿಯೇ ಮಗನಿಂದ ಕೊಲೆಯಾಗಿದ್ದಾನೆ. ಪುತ್ರ ಸುರೇಶ್ ದೊಡ್ಡಮನೆ ಕೊಲೆ ಆರೋಪಿಯಾಗಿದ್ದಾನೆ. ಸದ್ಯ ತಲೆ ಮರಿಸಿಕೊಂಡಿರುವ ಆರೋಪಿ ಸುರೇಶನ ಶೋಧಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮನೆ ಯಜಮಾನನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಮದ್ವೆಯಾದಾಗಿನಿಂದ ಸುರೇಶ ಕುಡಿತದ ದಾಸ ಆಗಿದ್ದನಂತೆ ಯಾರು ಕುಡಿಸುತ್ತಾರೋ ಅವರ ಬಳಿ ಕೆಲಸಕ್ಕೆ ಹೋಗುತ್ತಿದ್ದ ಸಂಜೆಯಾಗ್ತಿದ್ದಂತೆ ಫುಲ್ ಟೈಟಾಗಿರುತ್ತಿದ್ದನಂತೆ ಊರಿನ ಹಬ್ಬಕ್ಕಾದರೂ ಮನೆ ಕೆಲಸ ಮಾಡಿ, ಬಣ್ಣ ಹಚ್ಚಿ ಮನೆ ಶುದ್ಧ ಮಾಡಿಕೊಳ್ಳಿ ಅಂತಾ ಸಹಜವಾಗೇ ಭರಮಪ್ಪ ಬುದ್ಧಿ ಹೇಳಿದ್ದನಂತೆ, ಬುದ್ಧಿ ಹೇಳಿ ತುಸು ಗದರಿದ ತಂದೆಯ ಮೇಲೆ ಯಮನಂತೆ ಎರಗಿದ್ದ.
ಮೃತ ಭರಮಪ್ಪನಿಗೆ ನಾಲ್ವರು ಮಕ್ಕಳು. ಆದರೆ ಹಿರಿಯ ಮಗ ಸುರೇಶನೊಂದಿಗೆ ಭರಮಪ್ಪ ಇದೇ ಮನೆಯಲ್ಲಿ ವಾಸವಾಗಿದ್ದ. ಸುರೇಶನಿಗೂ ಮೂವರು ಮಕ್ಕಳು ಇದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನೈತಿಕ ಸಂಬಂಧಕ್ಕೆ ಅಡ್ಡಿ, ತಮ್ಮನನ್ನೇ ಕೊಂದ ಅಕ್ಕ