Select Your Language

Notifications

webdunia
webdunia
webdunia
webdunia

ರಾಜ್ಯ ಶಿಕ್ಷಣದಲ್ಲಿ ಕೇಸರಿಕರಣ: ಆಕ್ರೋಶ

ರಾಜ್ಯ ಶಿಕ್ಷಣದಲ್ಲಿ ಕೇಸರಿಕರಣ: ಆಕ್ರೋಶ
ಬೆಂಗಳೂರು , ಸೋಮವಾರ, 16 ಮೇ 2022 (14:01 IST)
ಬೆಂಗಳೂರು : ಪಠ್ಯ ಪುಸ್ತಕದಲ್ಲಿ ಟಿಪ್ಪು ವಿವಾದದ ಬಳಿಕ ಈಗ ಹೆಡ್ಗೆವಾರ್ ವಿವಾದ ಆರಂಭವಾಗಿದೆ. 10ನೇ ತರಗತಿ ಪಠ್ಯ ಪುಸ್ತಕದಲ್ಲಿ ಈಗ ಆರ್ ಎಸ್ ಎಸ್ ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡ್ಗೆವಾರ್  ಅವರ ಭಾಷಣ ಸೇರ್ಪಡೆಗೆ ಯೋಜನೆ ಸಿದ್ದವಾಗುತ್ತಿದೆ. ಭಗತ್ ಸಿಂಗ್ ಪಾಠವನ್ನು ಕೈಬಿಟ್ಟು ಕೇಶವ ಬಲಿರಾಮ್ ಹೆಡ್ಗೆವಾರ್ ಬಗೆಗಿನ ಪಠ್ಯ ಕ್ರಮ ಅಳವಡಿಸುವುದಕ್ಕೆ ಎಲ್ಲೆಡೆಯಿಂದ  ಆಕ್ರೋಶ ವ್ಯಕ್ತವಾಗಿದೆ.
 
2022-23 ನೇ ಶೈಕ್ಷಣಿಕ ವರ್ಷದಿಂದ 10ನೇ ತರಗತಿ ಪಠ್ಯಪುಸ್ತಕದಲ್ಲಿ ಹೆಡ್ಗೆವಾರ್ ಅವರ ಭಾಷಣವನ್ನು ಪಠ್ಯವಾಗಿ ಮಾರ್ಪಾಡು ಮಾಡುವ ಮೂಲಕ ಶಿಕ್ಷಣದಲ್ಲಿ ಕೇಸರಿಕರಣಕ್ಕೆ   ಶಿಕ್ಷಣ ‌ಇಲಾಖೆ ಮುಂದಾಗಿದ್ದು, ಇದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇಷ್ಟು ಮಾತ್ರವಲ್ಲದೆ   ಪ್ರಸಿದ್ಧ ಬರಹಗಾರ ಮತ್ತು ಪತ್ರಕರ್ತ ಪಿ.ಲಂಕೇಶ್ ಅವರ ಜನಾಂಗೀಯ ದ್ವೇಷವನ್ನು ಖಂಡಿಸುವ " ಮೃಗ ಮತ್ತು ಸುಂದರಿ",  ಪ್ರಸಿದ್ಧ ಲೇಖಕಿ ಸಾರಾ ಅಬೂಬಕರ್ ಅವರ "ಯುದ್ಧ", ಲೇಖಕ ಎ.ಎನ್.ಮೂರ್ತಿರಾಯರ " ವ್ಯಾಘ್ರಗೀತೆ" ಎಡಪಂಥೀಯ ಚಿಂತಕ ಜಿ. ರಾಮಕೃಷ್ಣ ಅವರ "ಭಗತ್ ಸಿಂಗ್"  ಹೀಗೆ ಹಲವು ಪಾಠಗಳನ್ನು ಪಠ್ಯಪುಸ್ತಕ ಪರಿಶೀಲನಾ ಸಮಿತಿ  ಕೈ ಬಿಟ್ಟಿದೆ. 
 
ಬದಲಿಗೆ, ಬರಹಗಾರ ಶಿವಾನಂದ ಕಳವೆ ಅವರ “ಸ್ವದೇಶಿ ಸೂತ್ರದ ಸರಳ ಹಬ್ಬ” ಮತ್ತು ಎಂ. ಗೋವಿಂದ ಪೈ ಅವರ “ನಾನು ಪ್ರಾಸ ಬಿಟ್ಟ ಕಥೆ” ಜೊತೆಗೆ ವೇದ ವಿದ್ವಾಂಸರಾದ ದಿವಂಗತ ಬನ್ನಂಜೆ ಗೋವಿಂದಾಚಾರ್ಯರ "ಸುಕನಾಶನ ಉಪದೇಶ" ಮತ್ತು ಶತಾವಧಾನಿ ಆರ್. ಗಣೇಶ್ ಅವರ "ಶ್ರೇಷ್ಠ ಭಾರತೀಯ ಚಿಂತನೆಗಳು" ಸೇರಿಸಲಾಗಿದೆ.
 
ಬರಹಗಾರ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ಹೆಡ್ಗೆವಾರ್ ಅವರ ಭಾಷಣದ ಪಠ್ಯವನ್ನು ಪಠ್ಯಕ್ರಮದಲ್ಲಿ ಸೇರಿಸಲು ಶಿಫಾರಸು ಮಾಡಿದೆ. ಪಾಠದ ತಲೆ ಬರಹವನ್ನು "ನಿಜವಾದ ಆದರ್ಶ ಪುರುಷ ಯಾರಾಗಬೇಕು?" ಎಂದು ಕೊಡಲಾಗಿದೆ. ಇದೀಗ ಮುದ್ರಣ ಹಂತದಲ್ಲಿರುವ ಕನ್ನಡ ಗದ್ಯ ಪಠ್ಯಪುಸ್ತಕದಲ್ಲಿ 5ನೇ ಸ್ಥಾನ ಈ ಪಾಠವಿದೆ. ಸಮಿತಿಯು ಈ ಬಗ್ಗೆ ಮಾರ್ಚ್‌ನಲ್ಲಿ ತನ್ನ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.
 
ಇದು ಸೈದ್ಧಾಂತಿಕ ಹೇರಿಕೆ ಅಲ್ಲ ಎಂದು ಬರಹಗಾರ ರೋಹಿತ್ ಚಕ್ರತೀರ್ಥ ಸಮರ್ಥಿಸಿಕೊಂಡಿದ್ದು, " ನಮಗೆ ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಯ ಒತ್ತಡ ಇರಲಿಲ್ಲ. ಇದು ಯಾವುದೇ ಸಂಘಟನೆಯ ಸಿದ್ಧಾಂತವನ್ನು ವಿದ್ಯಾರ್ಥಿಗಳ ಮೇಲೆ ಹೇರಿದಂತಾಗುವುದಿಲ್ಲ. ನಾವು ಹೆಡ್ಗೆವಾರ್ ಅವರನ್ನು ಬರಹಗಾರರಾಗಿ ಆಯ್ಕೆ ಮಾಡಿದ್ದೇವೆ ಹೊರತು ಅವರ ಸಿದ್ಧಾಂತ ಅಥವಾ ಸಂಘಟನೆಯ ಆಧಾರದ ಮೇಲೆ ಅಲ್ಲ ಎಂದಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್ ಅವರು ಪಠ್ಯಪುಸ್ತಕಗಳಿಗೆ ಸೇರಿಸಿರುವ ಮತ್ತು ತೆಗೆದು ಹಾಕಿರುವ ವಿಚಾರದ ಬಗ್ಗೆ ಮಾತನಾಡಿ, ಇದರಲ್ಲಿ ಆಕ್ಷೇಪಾರ್ಹವಾದುದೇನು ಇಲ್ಲ. ಅನೇಕ ಪ್ರಗತಿಪರ ಲೇಖಕರು ಮತ್ತು ಹೋರಾಟಗಾರರು ವಿದ್ಯಾರ್ಥಿಗಳಲ್ಲಿ ಹಿಂದುತ್ವ ಸಿದ್ಧಾಂತವನ್ನು ತುಂಬುವ ಪ್ರಯತ್ನಗಳ ಬಗ್ಗೆ ಆಕ್ಷೇಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಿಂದಲೇ ಪ್ರಿಯಾಂಕಾಗೂ ರಾಜಕೀಯ ಭವಿಷ್ಯ?