ನವದೆಹಲಿ: ಅಜ್ಜಿ ಇಂದಿರಾ ಹಾಗೂ ಅಮ್ಮ ಸೋನಿಯಾ ಗಾಂಧಿ ಬಳಿಕ ಪ್ರಿಯಾಂಕಾ ಗಾಂಧಿ ರಾಜ್ಯದತ್ತ ಮುಖ ಮಾಡ್ತಾರಾ ಅನ್ನೋ ಪಿಸುಮಾತುಗಳು ರಾಜ್ಯ ರಾಜಕಾರಣದಲ್ಲಿಹರಿದಾಡುತ್ತಿದೆ.
ಮುಂದಿನ ತಿಂಗಳು ನಡೆಯುವ ರಾಜ್ಯಸಭಾ ಚುನಾವಣೆಯಲ್ಲಿ ರಾಜ್ಯದಿಂದಲೇ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಹಾಗಾದ್ರೆ ಇಲ್ಲಿಂದ ಸ್ಪರ್ಧಿಸಿ ಅಜ್ಜಿ ಹಾಗೂ ಅಮ್ಮನಂತೆ ತಮ್ಮ ರಾಜಕೀಯ ಬದುಕಿನ ತಿರುವು ಪಡೆದುಕೊಳ್ಳಬಹುದು
ಮುಂದಿನ ತಿಂಗಳು ಜೂನ್ 10 ರಂದು ರಾಜ್ಯಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಡಿಕೆಶಿ, ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಮೂವರೂ ಆಹ್ವಾನಿಸಿದ್ದಾರೆನ್ನಲಾಗಿದೆ. ಆದರೆ ಈ ಮೂವರಲ್ಲಿ ಡಿಕೆಶಿ ಈ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದಾರೆಂಬ ಮಾತುಗಳೂ ಜೋರಾಗಿವೆ. ಇನ್ನು ಈ ಆಹ್ವಾನದ ಹಿಂದೆ ಡಿಕೆಶಿ ಹಲವಾರು ಮಾಸ್ಟರ್ ಪ್ಲಾನ್‌ಗಳಿವೆ ಎಂದೂ ಅಂದಾಜಿಸಲಾಗಿದೆ.