Select Your Language

Notifications

webdunia
webdunia
webdunia
webdunia

ಬಿಜೆಪಿ ನಿಮ್ಮನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ : ಪ್ರಿಯಾಂಕಾ

ಬಿಜೆಪಿ ನಿಮ್ಮನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ : ಪ್ರಿಯಾಂಕಾ
ನವದೆಹಲಿ , ಶುಕ್ರವಾರ, 25 ಫೆಬ್ರವರಿ 2022 (14:45 IST)
ಲಕ್ನೋ : ಬಿಜೆಪಿ ಉದ್ದೇಶಪೂರ್ವಕವಾಗಿ ಜನರನ್ನು ಬಡವರನ್ನಾಗಿ ಮತ್ತು ಉಚಿತ ಪಡಿತರ ಮೇಲೆ ಅವಲಂಬಿತರನ್ನಾಗಿ ಮಾಡಿದೆ.

ಆದರೆ ಅಭಿವೃದ್ಧಿ ಮತ್ತು ನಿರುದ್ಯೋಗದ ಬಗ್ಗೆ ಯಾರು ಮಾತನಾಡಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.

ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಗಲಿರುಳು ಶ್ರಮಿಸುವ ಸರ್ಕಾರವನ್ನು ಆರಿಸಬೇಕೆಂದು ಜನರನ್ನು ಒತ್ತಾಯಿಸಿದ್ದಾರೆ. ಬಿಜೆಪಿಯವರು ಪಡಿತರ ಮೂಟೆ ಕೊಟ್ಟಿದ್ದಾರೆ ಎಂದು ಕೆಲವರು ಹೇಳುತ್ತಾರೆ.

ಬಿಜೆಪಿಯವರು ಬ್ಯಾಂಕ್ ಖಾತೆಗಳನ್ನು ತೆರೆದು ಸ್ವಲ್ಪ ಹಣವನ್ನು ಕಳುಹಿಸಿದ್ದಾರೆ. ಐದು ವರ್ಷಗಳಲ್ಲಿ ಬಿಜೆಪಿ ಎಷ್ಟೋ ಕೆಲಸಗಳನ್ನು ಮಾಡಿದೆ ಎನ್ನುತ್ತಾರೆ. ಆದರೆ ಬಿಜೆಪಿ ಸಾರ್ವಜನಿಕರನ್ನು ಪಡಿತರ ಮೇಲೆ ಅವಲಂಬಿತರಾಗುವಂತೆ ಮಾಡಿದೆ. ಉದ್ದೇಶಪೂರ್ವಕವಾಗಿ ಜನರನ್ನು ಬಡವರನ್ನಾಗಿ ಮಾಡಿದೆ.

ನಿಮಗೆ ಕೆಲಸ ಸಿಗುತ್ತಿಲ್ಲ ಎಂಬುವುದಕ್ಕೆ ಉದ್ಯೋಗವಿಲ್ಲ ಎಂದರ್ಥವಲ್ಲ. ನಿಮಗೆ ಕೆಲಸ ಸಿಗದೇ ನಿರುದ್ಯೋಗಿಯಾಗಿ ಉಳಿದುಕೊಂಡರೆ, ನೀವಿನ್ನು ಚಿಕ್ಕವರಾಗಿರುವುದರಿಂದ ನಿಮಗೆ ಶಕ್ತಿಯಿದೆ. ನೀವು ಬೇಗ ಕೋಪಗೊಳ್ಳುತ್ತೀರಾ, ನೀವು ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತೀರಾ, ಆಗ ಅವರು ನಿಮ್ಮನ್ನು ಕೆಣಕಲು ಸುಲಭವಾಗುತ್ತದೆ ಎಂದು ತಿಳಿದುಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ 'ಕೋವಿಡ್ ಪರೀಕ್ಷೆ' ನಿಲ್ಲಿಸಿ : ರಾಜ್ಯ ಸರ್ಕಾರ ಆದೇಶ