ಪಣಜಿ : ಕೊರೊನಾ ಮೊದಲನೆ ಅಲೆಯಲ್ಲಿ ವಲಸೆ ಹೋಗುತ್ತಿದ್ದ ಕಾರ್ಮಿಕರು ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರು.
ಇದರಿಂದ ಕಾಂಗ್ರೆಸ್ನಿಂದ ಸಹಾಯ ಮಾಡಿದೆವು. ಆದರೆ ಮೋದಿ ಅವರು ಇದರಿಂದಲೇ ಕೋವಿಡ್ ಹೆಚ್ಚುತ್ತಿದೆ ಎನ್ನುತ್ತಿದ್ದಾರೆ. ಅವರು ಏನು ಬಯಸಿದ್ದರು, ಅವರಿಗೆ ಯಾರು ಸಹಾಯ ಮಾಡಬಾರದು ಎಂದು ಬಯಸಿದ್ದರೇ ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿಕಾರಿದರು.
ನಿನ್ನೆ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಮಾತನಾಡಿ, ಕಾಂಗ್ರೆಸ್ ಹಾಗೂ ದೆಹಲಿ ಸರ್ಕಾರವು ವಲಸೆ ಕಾರ್ಮಿಕರಿಗೆ ಹೊರಹೊಗಲು ಉಚಿತ ಟಿಕೆಟ್ ನೀಡಿತ್ತು. ಇದರಿಂದಾಗಿ ಪಂಜಾಬ್, ಉತ್ತರಪ್ರದೇಶ, ಉತ್ತರಾಖಂಡದಲ್ಲಿ ಕೋವಿಡ್ ವೇಗವಾಗಿ ಹರಡಿದೆ ಎಂದು ಆರೋಪಿಸಿದ್ದರು.
ಕೊರೊನಾ ಎರಡನೇ ಅಲೆಯ ಸಮಯದಲ್ಲಿ ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಅವರು ನಡೆಸಿದ ರ್ಯಾಲಿಯಿಂದ ಕೊರೊನಾ ಹೆಚ್ಚಾಗಲಿಲ್ಲವೇ, ಆ ಸಮಯದಲ್ಲಿ ಭಾರದಲ್ಲಿ ಪ್ರತಿದಿನ 2 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗುತ್ತಿತ್ತು ಎಂದು ಟೀಕಿಸಿದರು.